ಎಂಇಎಸ್ ನಿಷೇಧಕ್ಕೆ ಗಡವು ನೀಡಿದ ವಾಟಾಳ್

ಬೆಳಗಾವಿಯಲ್ಲಿ ಪುಂಡಾಟಿಕೆ ಮೆರೆಯುತ್ತಿರುವ ನಾಡದ್ರೋಹಿ ಎಂಇಎಸ್ ನ್ನು ಹದಿನೈದು ದಿನದಲ್ಲಿ ನಿಷೇಧ ಮಾಡದಿದ್ದರೇ ಕರ್ನಾಟಕ ಬಂದ್ ಕರೆ ನೀಡುವ ಯೋಚನೆ ಮಾಡಲಾಗುವುದು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು.

promotions

ಶನಿವಾರ ನಗರದ ಚನ್ನಮ್ಮ ವೃತ್ತ ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬೆಳಗಾವಿಯಲ್ಲಿ ಕರ್ನಾಟಕ ಏಕೀಕರಣ ಇರಬೇಕು ಹೊರತು ಮಹಾರಾಷ್ಟ್ರ ಏಕೀಕರಣ ಎಂಬ ಸಂಘಟನೆ ಇರಕೂಡದು.

promotions

ಎಲ್ಲಿ ನೋಡಿದರು ಕನ್ನಡ ಧ್ವಜ ಕಾಣುವಂತೆ ಆಗಬೇಕು. ಮುಂಬರುವ 15 ದಿನಗಳಲ್ಲಿ ಬೆಳಗಾವಿಯಿಂದ ಎಮ್ ಇಎಸ್ ನಿಷೇಧ ಮಾಡಬೇಕು. ಸಿಎಂ ಯಡಿಯೂರಪ್ಪ ಅವರಿಗೆ ಗಡಿ ಭಾಗ ಬೇಕಾಗಿಲ್ಲ. ಅವರು ರಾಜ್ಯಕ್ಕೆ ವರವಾಗುವ ಬದಲು ಶಾಪ್ ವಾಗಿದ್ದಾರೆ ಎಂದು ಆರೋಪಿಸಿದರು.

Read More Articles