ಬಡವರ ಬೆನ್ನೆಲುಬಾಗಿ ಕೆಲಸ ಮಾಡಲು ಸಿದ್ದ, ಚಿಕ್ಕರೇವಣ್ಣವರ

ರಾಮದುರ್ಗ: ತಾಲೂಕಿನ ಬಡವರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಕೊಡಿಸಲು ಹೋಬಳಿಗೊಂದು ಸಿಬಿಎಸ್‌ಸಿ ಶಾಲೆಗಳನ್ನು ತೆರೆದು ತಾಲೂಕಿನಲ್ಲಿ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗೆ ಹಾಗೂ ಬಡವರ ಬೆನ್ನೆಲುಬಾಗಿ ಕೆಲಸ ನಿರ್ವಹಿಸತ್ತೇನೆ ಎಂದು ಉದ್ಯಮಿ ಹಾಗೂ ಸಮಾಜ ಸೇವಕ ಚಿಕ್ಕರೇವಣ್ಣವರ ಭರವಸೆ ನೀಡಿದರು. ತಾಲೂಕಿನ ಮುದೇನೂರ ಗ್ರಾಮದಲ್ಲಿ ವಿನೂತನ ಶೈಲಿಯೊಂದಿಗೆ ಜೀರ್ಣೋದ್ಧಾರಗೊಂಡ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಹಾಗೂ ಕನಕದಾಸರ ಮೂರ್ತಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

promotions
logintomyvoice

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಂಗೋಳ್ಳಿ ರಾಯಣ್ಣನವರ ಆದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಕೆ ಮಾಡಿಕೊಳ್ಳಬೇಕು. ಕನಕದಾಸರ ಭಕ್ತಿಪೂರ್ವಕ ಕೀರ್ತನೆಗಳ ಸಾರವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಬೆಂಗಳೂರಿನಲ್ಲಿ ನನ್ನ ಉದ್ಯಮ ಕ್ಷೇತ್ರದಿಂದ ಬಂದ ಆದಾಯದಲ್ಲಿ ಅತ್ಯಲ್ಪ ಹಣವನ್ನು ಕ್ಷೇತ್ರದ ಬಡವರು ಹಾಗೂ ಎಲ್ಲ ಸಮುದಾಯಗಳ ಜನತೆಯ ಸೇವೆ ಮಾಡಲು ವಿನಿಯೋಗಿಸಲು ಬದ್ಧನಿದ್ದೇನೆ ಎಂದು ಇದೆ ಸಂದರ್ಭದಲ್ಲಿ ಅವರು ಭರವಸೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುರುಬ ಸಮಾಜದ ತಾಲೂಕಾ ಘಟಕದ ಅಧ್ಯಕ್ಷ ವಿಠ್ಠಲ ಜಟಗನ್ನವರ, ಸಮಾಜ ಅಭಿವೃದ್ಧಿಯಾಗಲು ಮೊದಲು ಶೈಕ್ಷಣಿಕ ಪ್ರಗತಿಯಾಗಬೇಕು.

promotions
logintomyvoice

ಆ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸಿಕೊಡಬೇಕೆಂದರು. ಈ ಸಂದರ್ಭದಲ್ಲಿ ಧಾರವಾಡ ಜಿ.ಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ, ಜಿ,ಪಂ ಸದಸ್ಯ ರೇಣಪ್ಪ ಸೋಮಗೊಂಡ, ರಾಜ್ಯ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಅಶೋಕ ಮೆಟಗುಡ್ಡ, ಎಪಿಎಂಸಿ ಮಾಜಿ ಅಧ್ಯಕ್ಷ ಫಕೀರಪ್ಪ ಕೊಂಗವಾಡ, ದ್ಯಾಮಣ್ಣ ಮಲ್ಲಾಪೂರ, ನೀಲಪ್ಪ ಚಾಕಲಬ್ಬಿ, ಕೆಂಪಣ್ಣ ಕ್ವಾರಿ, ಬಸವರಾಜ ಶೇಡಬಾಳ, ಮಹಾದೇವ ಶರಮಗೊಂಡ, ಮೈಲಾರಪ್ಪ ಗೊಂದೆಪ್ಪನವರ, ಲಕ್ಕಪ್ಪ ಹುರಕನ್ನವರ, ಫಕೀರಪ್ಪ ಮೆಟಗುಡ್ಡ ಸೇರಿದಂತೆ ಇತರರು ಇದ್ದರು.

Read More Articles