ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
- 17 Dec 2023 , 9:37 PM
- Belagavi
- 171
ಯಮಕನಮರಡಿ: ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮ ಪಂಚಾಯತಿಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶಂಕರ ಅಜ್ಜಪ್ಪ ಡೊಂಬಾರಿ ಉಪಾಧ್ಯಕ್ಷರಾಗಿ ಜಯಶ್ರೀ ಪ್ರಕಾಶ ಮಠದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಹುಕ್ಕೇರಿ ಬಿಇಒ ಮೋಹನ ದಂಡಿನ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಮಕ್ತುಮಸಾಹೇಬ ಅಪ್ಪುಬಾಯಿ, ಶಮಶುದ್ದೀನ ಕೋತವಾಲ, ತಾ.ಪಂ. ಸದಸ್ಯ ಯಲ್ಲಪ್ಪ ಬೆಡಸೂರಿ, ಹಣಮಂತ ದಾಸ ರಾಮಚಂದ್ರ ನಾಯಿಕ, ಲಕ್ಷ್ಮಣ ಹಮಾನಿ, ನಿಂಗಪ್ಪ ಪಾಟೀಲ, ಫಕೀರಪ್ಪ ಹುಂದ್ರಿ, ಬಸ್ಸು ಕರಗುಪ್ಪಿ, ಈರಪ್ಪ ಬಾಗರಾಯಿ, ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ ನಿರ್ದೇಶಕ ಈರಣ್ಣಾ ಬಂಜಿರಾಮ, ವಿನೋದ ಡೊಂಗ್ರೆ, ಮಾರುತಿ ಗುಟಗುದ್ದಿ, ಬಸವರಾಜ ಡುಮ್ಮನಾಯಿಕ, ಶಹಾಬಂದರ ಗ್ರಾ.ಪಂ. ಪಿಡಿಓ ರಮೇಶ ತೇಲಿ, ಹಾಗೂ ಸರ್ವ ಸದಸ್ಯರು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.












