ಸಚಿವ ಕತ್ತಿಗೆ ಸನ್ಮಾನ
- 18 Dec 2023 , 10:46 PM
- Belagavi
- 116
ಯಮಕನಮರಡಿ :- ಇತ್ತೀಚೆಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಹುಕ್ಕೇರಿ ಪದಾಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ನೂತನ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಅವರಿಗೆ ಭೇಟಿಯಾಗಿ ಬೆಲ್ಲದ ಬಾಗೇವಾಡಿಯಲ್ಲಿ ಸನ್ಮಾನಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ಅಧ್ಯಕ್ಷರಾದ ಎಮ್.ಬಿ. ನಾಯಿಕ, ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಬಿ. ಅಂಗಡಿ, ಪ್ರಧಾನ ಕಾರ್ಯದರ್ಶಿಗಳಾದ ಆರ್.ಎನ್. ಸಿಂಗಾಡಿ, ಖಜಾಂಜಿಯಾದ ರಾಜು ತಳವಾರ, ಜಿಲ್ಲಾ ಪ್ರತಿನಿಧಿಯಾದ ಶ್ರೀಮತಿ ಸುರೇಖಾ ಮೇಲಗರಿ, ಹಿರಿಯ ಶಿಕ್ಷರಾದ ಕೆ.ಸಿ. ಮುಚಕಂಡಿ, ಇನ್ನುಳಿದಂತೆ ಸಂಘದ ಪ್ರತಿನಿದಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.












