ಕ್ವಾರಂಟೈನಲ್ಲಿದ್ದಂತವರನ್ನು ಬೇಟಿ ಮಾಡಿ ಅವರ ಯೋಗ ಕ್ಷೇಮ ವಿಚಾರಿಸಿದ ಸತೀಶ ಜಾರಕಿಹೊಳಿ

ಬೆಳಗಾವಿ: ಕಾಂಗ್ರೆಸ್ ಕಾರ್ಯ ಅದ್ಯಕ್ಷ ರಾಗಿರು ಸತೀಶ ಜಾರಕಿಹೊಳಿ ಯವರು ಇಂದು ಹಲವು ಗ್ರಾಮಗಳಿಗೆ ಬೇಟಿ ಮಾಡಿ ಹಾಗೂ ಶಾಲೆಗಳಲ್ಲಿ ಕ್ವಾರಂಟೈನಲ್ಲಿದ್ದಂತವರನ್ನು ಬೇಟಿ ಮಾಡಿ ಅವರ ಯೋಗ ಕ್ಷೇಮ ವಿಚಾರಿಸಿದರು. ಹಂದಿಗನೂರ, ಕಟ್ಟಕಭಾವಿ,ಬೋಡಕನಟ್ಟಿ ಹಾಗೂ ಕುರಿಹಾಳ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕರು ಡಿಸೆಂಬರ್‌ ವೇಳೆಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಮತ್ತು ಕೊರೊನಾ ದೊಂದಿಗೆ ನಾವು ಬದುಕುಬೇಕಾವುದು ಅನಿವಾರ್ಯವಾಗಿದೆ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸ್ವಚ್ಛತೆ ಕಾಪಾಡಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮಾಸ್ಕ್ ಬಳಕೆ ಮಾಡುವ ಮೂಲಕ ಕೊರೋನಾ ಹರಡದಂತೆ ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

promotions

Read More Articles