ಸಂಸದ ಜೊಲ್ಲೆ ನಾಗಪುರ ಆರ್ ಎಸ್ ಎಸ್ ಪ್ರಧಾನ ಕಚೇರಿಗೆ ಭೇಟಿ
- 15 Jan 2024 , 12:43 AM
- Mahashtra
- 102
ನಾಗಪುರ: ನಾಗಪುರದಲ್ಲಿರುವ ಆರ್.ಎಸ್.ಎಸ್ ಪ್ರಧಾನ ಕಚೇರಿಗೆ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಭೇಟಿ ನೀಡಿದರು. 1925 ಸೆಪ್ಟೆಂಬರ್ 27ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದ ಮೊಹಿತೇವಾಡದಲ್ಲಿ ಮಹಾನ್ ದೇಶಭಕ್ತ ಶ್ರೀ ಕೇಶವ ಬಲಿರಾಂ ಹೆಡ್ಗೆವಾರ್ ಅವರು ಈ ಕಛೇರಿಯನ್ನು ಸ್ಥಾಪನೆ ಮಾಡಿದರು. ಇಂದು ಅವರು ನಮ್ಮೊಂದಿಗಿಲ್ಲದ್ದರೂ ದೇಶಕ್ಕೆ ನೀಡಿದ ಸೇವಾಕಾರ್ಯಗಳು ಅವಿಸ್ಮರಣೀಯ. ಹೀಗಾಗಿ ಈ ಕೇಂದ್ರ ಸ್ಥಳದಲ್ಲಿ ಹೆಡ್ಗೆವಾರ್ ಸ್ಮರಣಾರ್ಥ ಅತ್ಯದ್ಭುತವಾಗಿ ಅವರ ಪ್ರತಿಮೆಯನ್ನು ನಿರ್ಮಿಸಲಾಗಿದೆ. ವಿವಿಧ ವಾಸ್ತು ಶಿಲ್ಪಗಳು, ವಸ್ತು ಸಂಗ್ರಾಹಲಯವಿರುವ ಈ ಕಟ್ಟಡ, ಹಿಂದೂ ಧರ್ಮದ ಮಹತ್ವ, ದೇಶಪ್ರೇಮವನ್ನು ಬಿಂಬಿಸುತ್ತವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.












