ರಾಯಬಾಗ ಸಾರಿಗೆ ಸಚಿವರ ತವರು ಜಿಲ್ಲೆಯಲ್ಲಿ ಬಸ್ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು.
- 15 Jan 2024 , 2:46 AM
- Belagavi
- 101
ಬೆಳಗಾವಿ : ಜಿಲ್ಲೆಯ ಸಾರಿಗೆ ಸಚಿವರ ತವರಲ್ಲೇ ವಿದ್ಯಾರ್ಥಿ ಗಳಿಗೆ ಬಸ್ ಇಲ್ಲದೆ ರಾಯಬಾಗ ತಾಲೂಕಿನ ಮುಗಳಕೋಡ ನಲ್ಲಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಕೊರೋನಾ ಮಹಾಮಾರಿ ಯಿಂದ ಮಕ್ಕಳ ವಿದ್ಯಾಭ್ಯಾಸ ಹಾಳಾಗಿ ಹೋಯಿತು ಅಂತಾ ವಿದ್ಯಾರ್ಥಿಗಳ ಪೋಷಕರು ನೋವನ್ನ ಅನುಭವಿಸತಾ ಇದ್ದಾರೆ ಆದರೆ ಒಂದ ಕಡೆ ಸಾರಿಗೆ ಸಚಿವರೇ ಬೆಳಗಾವಿ ಜಿಲ್ಲೆಯವರು ಆಗಿರುವುದರಿಂದ ವಿದ್ಯಾರ್ಥಿಗಳಿಗೆ ಯಾವ ರೀತಿನೂ ಸರಿಯಾದ ಬಸಗಳ ಅನುಕೂಲ ಇಲ್ಲಾ ಅಂತಾ ಹೇಳಬಹುದು.


ಇದರಿಂದ ಗೋಕಾಕ್ ಮತ್ತು ಅಥಣಿ ನಡುವೆ ಒಂದೇ ಬಸ್ ಇದೆ ಅಂತಾ ವಿದ್ಯಾರ್ಥಿಗಳು ತಿಳಿಸಿದರು. ನಂತರ ಮುಂಜಾನೆ ಶಾಲೆ ಕಾಲೇಜುಗಳಿಗೆ ತೆರಳಲು ಬಸ್ ಗಳೇ ಇಲ್ಲದಂತಾಗಿದೆ ಎಂದರು ಕಾಲೇಜಗಳು ಪ್ರಾರಂಭವಾದ ಮೇಲೆ ಅರ್ಧಕ್ಕೆ ಹೋಗಿ ಕುಂಡ್ರುವಂತ ಸ್ಥಿತಿಯಾಗಿದೆ ಎಂದು ನೋವನ್ನು ತುಡಿಕೊಂಡರು. ನಂತರ ವಿದ್ಯಾರ್ಥಿಗಳು ಬಸಗಳನ್ನು ತಡೆದು ಪ್ರತಿಭಟನೆ ಮಾಡುತ್ತಿರುವಾಗ ಸ್ಥಳೀಯ ಪಿಎಸ್ಐ ನವರು ಆಗಮಿಸಿ ಸಮಸ್ಯೆಯನ್ನು ತಿಳಿಗೊಳಿಸಿದರು.

ನಂತರ ಸ್ಥಳೀಯ ಶಾಸಕರು ಬರೋವರೆಗೂ ನಾವು ಈ ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು. ಆದ್ದರಿಂದ ಬಸಗಳ ಅನುಕೂಲವನ್ನು ಸರಕಾರ ಮತ್ತು ಬೆಳಗಾವಿ ಜಿಲ್ಲೆಯವರೆ ಸಾರಿಗೆ ಸಚಿವರೇ ಆಗಿರುವಾಗ ಯಾವ ರೀತಿಯಲ್ಲಿ ಬಸ್ಸಿನ ಅನುಕೂಲತೆ ಮಾಡಿಕೊಡುತ್ತಾರೆ ಎಂದು ಕಾದು ನೋಡಬೇಕಿದೆ.










