ಬೆಳಗಾವಿ: ರಾಯಬಾಗ ತಾಲೂಕೀನ ನಿಲಜಿ ಗ್ರಾಮದ ಜನರು ದಿನ ನಿತ್ಯ ಕೂಲಿ ಕೆಲಸಕ್ಕಾಗಿ ರಾಯಬಾಗ ಹಾಗೂ ಇನ್ನಿತರ ಪಟ್ಟಣ ಹಾಗೂ ಹಳ್ಳಿಗಳಿಗೆ ವಲಸೆ ಹೋಗಿ ಅಲ್ಲಿಯೇ ಯಾವುದಾದರು ಕೆಲಸವನ್ನು ಮಾಡಿ ತಮ್ಮ ಉಪಜೀವನವನ್ನು ಸಾಗಿಸುತ್ತಿದ್ದರು. ಕೊರಾನಾ ವೈರಸ್ ಹಿನ್ನಲೆಯಲ್ಲಿ ಇಡಿ ದೇಶವೇ ಲಾಕ್ ಡೌನ ಮಾಡಿದ್ದರಿಂದ ವಲಸೆ ಹೋದ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಸ್ವಗ್ರಾಮಕ್ಕೆ ಮರಳಿದ್ದಾರೆ ಕೆಲಸವಿಲ್ಲದೆ ತಮ್ಮ ಜೀವನವನ್ನು ಸಾಗಿಸಲಾಗಿದೆ ಕಂಗಾಲಾದ ಕೂಲಿ ಕಾರ್ಮಿಕರಿಗೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಕೆಲಸ ಇಲ್ಲದೆ ಪರದಾಡುತ್ತಿರುವ ಬಡ ಕುಟುಂಬಗಳಿಗೆ ರಾಯಬಾಗ ತಾಲೂಕಿನ ನಿಲಜಿ ಗ್ರಾಮ ಪಂಚಾಯಿತಿಯಲ್ಲಿ ಹಲವು ಕುಟುಂಬಗಳಿಗೆ ದಿನಕ್ಕೆ 275 ರೂಪಾಯಿಗಳಂತೆ ಕೂಲಿ ಕೆಲಸ ಮಾಡಿ ಜೀವನಕ್ಕೆ ಆಶ್ರಯ ಪಡೆದುಕೂಂಡಿದ್ದಾರೆ. ನಿಲಜಿ ಗ್ರಾಮದ ಹೊರವಲಯದ ಪಾಟೀಲ ತೋಟದ ಹತ್ತಿರ ಇರುವ ಹಳ್ಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ವಡ್ಡರ ಹಾಗೂ ತಹಶೀಲ್ದಾರ ಚಂದ್ರಕಾಂತ ಭಜಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನರೇಗಾ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಯೋಗ ಕ್ಷೇಮ ವಿಚಾರಿಸಿ ಅವರೂಂದಿಗೆ ಸಮಾಲೋಚನೆ ನಡೆಸಿದರು ಈ ಸಂದರ್ಭದಲ್ಲಿ ನಿಲಜಿ ಪಿಡಿಓ ದಳವಾಯಿ, ಕಾರ್ಯದರ್ಶಿ, ರೈತ ಮುಖಂಡ ಪಾಯಗೌಡ ಪಾಟೀಲ, ಗ್ರಾಮ ಪಂಚಾಯಿತ ಅಧ್ಯಕ್ಷ ಜಯವೀರ ಬಾಲೋಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.