ಸುಭಾಷ್ ಚಂದ್ರ ಅವರಿಗೆ ಗೌರವ ಸಮರ್ಪಣೆ.. ಎಲ್ಲಿದೆ ಇಲ್ಲಿ ನೋಡಿ

ಕಿತ್ತೂರು :ಬೆಳಗಾವಿ ಜಿಲ್ಲೆ ಭಾರತವನ್ನು ಬ್ರಿಟಿಷರ ಸಂಕೋಲೆಯಿಂದ ಬಿಡಿಸಲೇಬೇಕೆಂದು ತಾವು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ್ದ ಸೇನಾನಿ ಸುಭಾಷ್ ಚಂದ್ರ ಬೋಸ್, ನನಗೆ ರಕ್ತ ಕೊಡಿ ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಉದ್ವೇಷಿಸಿದವರು ಅವರು.

promotions

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ವಿದೇಶದಲ್ಲಿ ಸುತ್ತಾಡಿ ಆಜಾದ್ ಹಿಂದ್ ಫೌಜ್ ಎಂಬ ಸ್ವಂತ ಸೇನೆಯನ್ನೇ ಕಟ್ಟಿಕೊಂಡು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ವೀರ ಆತ. ಭಾರತವನ್ನು ಬ್ರಿಟಿಷರ ದಾಸ್ಯ ದಿಂದ ಮುಕ್ತ ಮಾಡಲು ಅವಿರತವಾಗಿ ಶ್ರಮಿಸಿದ, ಸಾವಿನೊಂದಿಗೆ ಸದಾ ಸೆಣಸಾಡುತ್ತಾ ಕಡೆಗೆ ಸಾವಿನಲ್ಲೂ ನಿಗೂಢವಾಗಿ ಉಳಿದ ಧೀಮಂತ ನಾಯಕ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವರ್ಷದ ಪ್ರಯುಕ್ತ ಯುವಾ ಬ್ರಿಗೇಡ್ ಈ "ರಕ್ತಮತ್ತುಸ್ವಾತಂತ್ರ್ಯ" ಎಂಬ ಬಹಿರಂಗ ಸಮಾವೇಶ ಹಮ್ಮಿಕೊಂಡಿದೆ.

promotions

ಬನ್ನಿ ನೀವು ಭಾಗವಹಿಸಿ ಮತ್ತು ನಿಮ್ಮ ಮಿತ್ರರನ್ನೂ ಕರೆ ತನ್ನುವಂತೆ ಪ್ರಕಟಣೆ ತಿಳಿಸಿದೆ. ದಿವ್ಯ ಸಾನಿಧ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ರಾಜಗುರು ಸಂಸ್ಥಾನ ಕಲ್ಮಠ ಚ.ಕಿತ್ತೂರು, ಭಾಷಣ ಚಕ್ರವರ್ತಿ ಸೂಲಿಬೆಲೆ ಸಂಸ್ಥಾಪಕರು, ಯುವಾ ಬ್ರಿಗೇಡ್ ಮಾಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 8867316025/ 9964092063 ಸಂಪರ್ಕಿಸಿ.

Read More Articles