ರಾಜ್ಯದ ತಲಾ 15 ಜಿಲ್ಲೆಗಳಿಗೆ ಪ್ರತ್ಯೇಕ ಆಹಾರ ವಿತರಣೆ: ಸಚಿವ ಕತ್ತಿ
- 26 Dec 2023 , 4:32 AM
- Belagavi
- 112
ಬೆಳಗಾವಿ ರಾಜ್ಯದ ಸಚಿನಾದ ಮೇಲೆ ದೆಹಲಿಗೆ ಭೇಟಿ ನೀಡಿ ರಾಜ್ಯಕ್ಕೆ ಅನುಸಾರವಾಗಿ 15 ಜಿಲ್ಲೆಗಳಿಗೆ ಜೋಳ, 15 ಜಿಲ್ಲೆಗಳಿಗೆ ಅಕ್ಕಿ ಕೊಡುವ ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದರು. ಶನಿವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿ ಬೆಳೆಯುವ ಅಕ್ಕಿ, ಜೋಳ, ರಾಗಿ ಖರೀದಿ ಮಾಡಲು ಸರಕಾರ ಚಿಂತನೆ ನಡೆಸಿದೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ನಾನು ಪ್ರತಿಭಟನೆ ಮಾಡುವೆ. ಆದರೆ ಯಾರೋ ಹೇಳ್ತಾರಂತೆ ನಾನು ಪ್ರತಿಭಟನೆ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಪ್ರತ್ಯುತ್ತರ ನೀಡಿದರು.

ಕರ್ನಾಟಕದ ಜನರಿಗೆ ಏನು ಬೇಕು ಎನ್ನುವುದನ್ನು ಸರಕಾರ ಮಾಡುತ್ತಿದೆ. ಅವರಿಗೆ ಬೇಡಾ ಅಂದರೆ ಮುಂದಿನ ವಿಚಾರ ಮಾಡೋಣ ಎಂದರು.










