ನಾನು ಶಾಸಕನಾಗುವ ಕನಸು ಬಿಟ್ಟಿದ್ದೇನೆ: ಮಾಜಿ ಶಾಸಕ ಸಂಜಯ ಪಾಟೀಲ
- 14 Jan 2024 , 10:55 PM
- Belagavi
- 115
ಬೆಳಗಾವಿ: ನಾನು ಶಾಸಕನಾಗುವ ಕನಸು ಬಿಟ್ಟಿದ್ದೇನೆ ಎಂದು ಬೆಳಗಾವಿ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿದರು. ಭಾನುವಾರ ನಗರದ ಸಿಪಿಎಡ್ ಮೈದಾನದಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳದ ನೂತನ ಗ್ರಾಪಂಗೆ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಸತ್ಕಾರ ಸಮಾರಂಭದ ಉದ್ದೇಶಿಸಿ ಮಾತನಾಡಿದರು. ನಾನು ಶಾಸಕನಾಗುವ ಕನಸನ್ನು ಬಿಟ್ಟಿದ್ದೇನೆ.


ಧನಂಜಯ ಜಾಧವ, ಶಿವಾಜಿ ಸುಂಟ್ಕರ್ ನೆಮ್ಮದಿಯಿಂದ ಇರಬಹುದು. ಆದರೆ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಾಲಾಗಿರುವ ಕ್ಷೇತ್ರವನ್ನು ಬರುವ ೨೦೨೩ರ ಚುನಾವಣೆಯಲ್ಲಿ ಬಿಜೆಪಿ ವಶಪಡಿಸಿಕೊಳ್ಳಬೇಕೆಂದು ಹೊಸ ಬಾಂಬ್ ಸಿಡಿಸಿದರು. ಚುನಾವಣೆಯಲ್ಲಿ ಗೆಲವು, ಸೋಲು ನಸೀಬು ಇರಬೇಕು.

ರಾಮಮಂದಿರ ನಿರ್ಮಾಣ ಮಾಡುವ ತಾಖತ್ತು ನರೇಂದ್ರ ಮೋದಿ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಅವರ ಕೈಯಲ್ಲಿ ದೇಶ ಸುಭದ್ರವಾಗಿದೆ ಎಂದು ಹೇಳಿದ ಅವರು ರಾಹುಲ್ ಗಾಂಧಿ ವಿರುದ್ಧ ಲೇವಡಿ ಮಾಡಿದರು.










