ರಾಷ್ಟ್ರದ ರಕ್ಷಣೆಗಾಗಿ ಭಾರತೀಯ ಯುವಕರು ಭಾರತಾಂಭೆಯ ಸೇವೆಗೆ ಸನ್ನದ್ದರಾಗುತ್ತಾರೆ: ಜಿಪಂ ಸದಸ್ಯ ಪವನ ಕತ್ತಿ
- 15 Jan 2024 , 12:57 AM
- Belagavi
- 190
ಹುಕ್ಕೇರಿ: ದೇಶ ರಕ್ಷಣೆಗಾಗಿ ಭಾರತೀಯ ಯುವಕರು ಪ್ರತಿ ಆರ್ಮಿರ್ಯಾಲಿಯಲ್ಲಿ ತನುಮನದಿಂದ ಭಾಗವಹಿಸಿ ಭಾರತಾಂಭೆಯ ಸೇವೆಗೆ ಸನ್ನದ್ದರಾಗುತ್ತಾರೆ ಇದು ಕೇವಲ ಭಾರತ ದೇಶದ ಯುವಕರಲ್ಲಿ ಮಾತ್ರ ಸಾಧ್ಯ ಅದು ಪರ ರಾಷ್ಟ್ರದಲ್ಲಿ ಇಲ್ಲಾ ಎಂದು ನಾಗರಮೊನ್ನೋಳಿ ಜಿಪಂ ಸದಸ್ಯ ಪವನ ಕತ್ತಿ ಹೇಳಿದರು. ಅವರು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನ ಸಾರ್ವಜನಿಕ ಮೈದಾನದಲ್ಲಿ ಶನಿವಾರ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥವಾಗಿ ಜೈ ಹನುಮಾನ ಕಬ್ಬಡಿ ತಂಡ ಶಿಂದಿಹಟ್ಟಿ(ಹಿಡಕಲ್ ಡ್ಯಾಂ) ಮತ್ತು ಬೆಳಗಾವಿ ಜಿಲ್ಲಾ ಅಮೋಚೂರ ಕಬ್ಬಡಿ ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಪುರುಷರ ಅಂತರರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು ಕ್ರೀಡೆಗಳನ್ನು ಹಮ್ಮಿಕೊಳ್ಳುವದ್ದರಿಂದ ಯುವಕರಲ್ಲಿ ಅವರ ಮನಸ್ಥಿತಿ ಏಕಾಗ್ರತೆ ಇರುವದು ಮತ್ತು ಸದೃಡವಾಗಿ ಆರೋಗ್ಯ ಇರುವದು ಮತ್ತು ಈಗಾಗಲೇ ಪರರಾಷ್ಟ್ರದ ಕೀಡೆಗಳನ್ನು ಇಂದು ನಾವು ಬದಿಗೊತ್ತಿ ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ, ಕುಸ್ತಿ, ಖೋಖೋ ಸೇರಿದಂತೆ ಆಟಗಳನ್ನು ಹೆಚ್ಚಿಗೆ ಆಸಕ್ತಿಯನ್ನು ಯುವಕರು ವಹಿಸಿ ಆಡುವದ್ದರಿಂದ ಅಲ್ಲಿಯ ದೈಹಿಕ ಶಿಕ್ಷಕರಿಗೆ ಪೋತ್ಸಾಹ ನೀಡಿದಂತಾಗುತ್ತದೆ ಎಂದರು. ಮುಖ್ಯ ಅತಿಥಿ ಯಮಕನಮರಡಿ ಪಿಎಸ್‍ಐ ರಮೇಶ ಪಾಟೀಲ ಮಾತನಾಡಿ ದೇಶದೊಳಗಿರುವ ನಮ್ಮ ಜನರು ಚನ್ನಾಗಿ ಇರಲಿ ಎಂದು ಭಾರತ ಗಡಿಭಾಗದಲ್ಲಿ ನಿದ್ದೆ ಮಾಡದೆ ಕೆಲಸ ಮಾಡುವ ಸೈನಿಕರನ್ನು ನಾವು ಸ್ಮರಣೆ ಮಾಡುವದು ಎಲ್ಲ ಕರ್ತವ್ಯವಾಗಿದೆ ಈಗಾಗಲೇ ಭಾರತ ದೇಶ ಸೈನಿಕರ ಶಕ್ತಿ ಏನು ಎಂಬಹುದು ಪಕ್ಕದ ದೇಶಗಳಿಗೆ ತೋರಿಸಿಕೊಟ್ಟಿದ್ದಾರೆ. ಆದ್ದರಿಂದ ನಶಿಸಿ ಹೋಗುತ್ತಿರುವ ಪುರಾತನ ಕ್ರೀಡೆಗಳನ್ನು ಪೋತ್ಸಾಹಿಸಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಆರ್ ಕರುಣಾಶೆಟ್ಟಿ, ಸಂತೋಷ ನಾಯಿಕ, ಹೊಸಪೇಟ ತಾಪಂ ಸದಸ್ಯ ಶ್ರೀಮತಿ ಲಕ್ಷ್ಮೀ ಪಂಚನ್ನವರ, ರೇಣುಕಾ ಬೂದಿಹಾಳ, ಮಾನಿಂಗ ಮರೆನ್ನವರ, ಶ್ರೀಮತಿ ತನುಶ್ರೀ ನಾಯಕ, ಶಿಕ್ಷಕರಾದ ಭೀರಪ್ಪಾ ಶಿವಣ್ಣಗೋಳ, ಸಂಗಮೇಶ ಶಿವಣ್ಣಗೋಳ, ರುಸ್ತಪೂರ ಗ್ರಾಪಂ ಅಧ್ಯಕ್ಷ ನಾಗಪ್ಪಾ ಚನ್ನವರ, ಪರಶುರಾಮ ಹಲಕರ್ಣಿ, ಮಲ್ಲಪ್ಪಾ ಸಾರವಾಡಿ, ರಮೇಶ ಮಗದುಮ್ಮ, ಮೋಸಿನ್ ಕಮನಾ, ಮಂಜುನಾಥ ಬಾಗೇವಾಡಿ, ಮಹಾಂತೇಶ ಹಲಹರ್ಣಿ, ಸಿದ್ದಪ್ಪಾ ರಾಮನಹಟ್ಟಿ, ಟೋಪಿ ಕಲೇಗಾರ ಮುಂತಾದವರು ಉಪಸ್ಥಿತರಿದ್ದರು. ಭೀರಪ್ಪಾ ಶಿವಣ್ಣಗೋಳ ಸ್ವಾಗತಿಸಿದರು. ಕೊನೆಯಲ್ಲಿ ಸುಭಾಷ ಕುಂಬಾರ ನಿರೂಪಿಸಿ ವಂದಿಸಿದರು.












