ಪಕ್ಷ ಸಂಘಟನೆ ಮಾಡುವುದು ಒಂದು ಭಾಗವಾಗಿದೆ: ಶಾಸಕ ಸತೀಶ

ಬೆಳಗಾವಿ :ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಪಕ್ಷ ಬಿಟ್ಟು ಹೊದಂತಾ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಲಾಗುತ್ತಿದೆ. ಕಾಂಗ್ರೆಸ್ ಗೆ ಆಹ್ವಾನ ಮಾಡುವುದು ಪಕ್ಷ ಕಟ್ಟುವ ಒಂದು ಭಾಗವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

promotions
logintomyvoice

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇಂದಿನಿಂದ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಗುತ್ತಿದ್ದು, ಗೋಕಾಕದಿಂದಲೇ ಆರಂಭಿಸಲಾಗಿದೆ. ಅಶೋಕ ಪೂಜಾರಿ ಸೇರಿದಂತೆ ಹಲವು ಮುಖಂಡರಿಗೆ ಆಹ್ವಾನ ನೀಡಿದ್ದೇವೆ. ಸಮಯಾವಕಾಶ ಕೇಳಿದ್ದಾರೆ. ಅವರ ತೀರ್ಮಾನದ ಬಳಿಕ ಮುಂದಿನ ಹೆಜ್ಜೆಯಾಗಿದೆ' ಎಂದರು.

promotions

'ಈಗಾಗಲೇ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರು ಕಮೀಟಿ ರಚನೆ ಮಾಡಿದ್ದಾರೆ. ಆ ತಂಡ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸೇರಲು ಇಚ್ಛೆ ಉಳ್ಳವರು, ಹಾಗೂ ಹಲವು ಕಾರಣಗಳಿಂದ ಪಕ್ಷ ಬಿಟ್ಟು ಹೋದ ನಾಯಕರನ್ನು ಆಹ್ವಾನ ಮಾಡಲಾಗುತ್ತಿದೆ. ನಾವು ಸಹ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಆಹ್ವಾನ ನೀಡುತ್ತೇವೆ ಎಂದು ಹೇಳಿದರು.

ತೈಲಬೆಲೆಏರಿಕೆಖಂಡಿಸಿಪ್ರತಿಭಟನೆ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಯಮಕನಮರಡಿ ಕ್ಷೇತ್ರದಲ್ಲಿಯೂ ಸಹ ಗುರುವಾರ ಹೈವೇ ಬಂದ್ ಮಾಡಿ, ಪ್ರತಿಭಟನೆ ನಡೆಸುತ್ತಿದ್ದೇವೆ. ಜನರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರವನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿಲ್ಲವೆಂದು ಸಾರ್ವಜನಿಕರು ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, ಜನರು ವೋಟ್ ಅವರಿಗೆ ಹಾಕಿದ್ದಾರೆ. ಅವರೇ ತಕ್ಕ ಪಾಠ ಕಲಿಸಬೇಕು. ಜನರು ನಮಗೆ ಶಕ್ತಿ ನೀಡಿದರೆ ಮಾತ್ರ ನಾವು ಪ್ರಶ್ನಿಸಲು ಸಾಧ್ಯ. ಆದ್ರು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಜನರು ಮುಂದಿನ ಚುನಾವಣೆಯಲ್ಲ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಹೇಳಿದವರೇಬಹಿರಂಗಪಡಿಸ್ಬೇಕು : 24 ಗಂಟೆಯಲ್ಲಿ 5 ಜನ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ತರಬಲ್ಲೇ ಎಂಬ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಅನ್ನುವುದು ಅವರೇ ಬಹಿರಂಗ ಪಡಿಸಬೇಕು. ಐದು ಜನ ಶಾಸಕರ ಯಾವಾಗ, ಎಲ್ಲಿ ಬರುತ್ತಾರೆ ಎಂದು ಅವರನ್ನೆ ಕೇಳಬೇಕು. ರಾಜಕೀಯದಲ್ಲಿ ಹೀಗೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಪಕ್ಷದಲ್ಲಿಯೇ ಸರಿ ಇಲ್ಲ. ಮತ್ಯಾರು ಕಾಂಗ್ರೆಸ್ ನವರು ಹೋಗುತ್ತಾರೆ ಎಂದು ಮರು ಪ್ರಶ್ನಿಸಿದರು.

ಸಿದ್ದರಾಮಯ್ಯ ನಮ್ಮ ನಾಯಕರು ಅಂತಾ ಮೊದಲಿನಿಂದಲೂ ಹೇಳುತ್ತಾರೆ. ಅದೇನೆ ಇದ್ದರು ನೀವು ರಮೇಶ್ ಅವರನ್ನೆ ಕೇಳಬೇಕು ಎಂದರು. ಟಿವಿ, ಪ್ರೀಡ್ಜ್, ಬೈಕ್ ಇದ್ದವರಿಗೆ ಬಿಪಿಎಲ್ ಕಾಡ್೯ ರದ್ದು ಮಾಡುವ ಸಚಿವ ಕತ್ತಿ ಹೇಳಿಕೆಗೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಟಿವಿ ಇಲ್ಲದೆ ಇರುವ ಮನೆ ಇಲ್ಲ.

ಸರ್ಕಾರಕ್ಕೆ ಬಡವರ ಪರ ಕೆಲಸ ಮಾಡೋ ಇಚ್ಛಾಶಕ್ತಿ ಇಲ್ಲ ಎನ್ನಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ , ಎಐಸಿಸಿ ಗೋವಾ ರಾಜ್ಯದ ವೀಕ್ಷಕ ಸುನೀಲ ಹನುಮಣ್ಣವರ ಇನ್ನಿತರರು ಇದ್ದರು.

Read More Articles