ಮಹಿಳೆಯರು ಹೊಲಿಗೆ ಕೆಲಸವನ್ನು ವೃತ್ತಿಯನ್ನಾಗಿ ಸ್ವೀಕರಿಸಿ: ಪ್ರಿಯಾಂಕಾ ಜಾರಕಿಹೊಳಿ
- 14 Jan 2024 , 10:34 PM
- Belagavi
- 118
ಹುಕ್ಕೇರಿ: "ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು" ಎಂದು ಯುವ ಮುಖಂಡೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ತಾಲೂಕಿನ ಚಿಕ್ಕಲಗುಡ್ಡ ಗ್ರಾಮದ ಸರ್ವೋದಯ ಮಹಿಳಾ ಮಂಡಳದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಹೊಲಿಗೆ ಯಂತ್ರ ನಿರ್ವಹಣೆ ತರಬೇತಿ ಪಡೆದ ಫಲಾನುಭವಿಗಳಿಗೆ ಮಂಗಳವಾರ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.

"ಮಹಿಳಾ ಮಂಡಳದಿಂದ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಅನೇಕ ಮಹಿಳೆಯರಿಗೆ ಸರ್ಕಾರದ ಯೋಜನೆಯಡಿ ಹೊಲಿಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಮಹಿಳೆಯರು ಹೊಲಿಗೆ ಕೆಲಸವನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಆರ್ಥಿಕವಾಗಿ ಸದೃಢರಾಗಬೇಕು" ಎಂದರು.

ಇದೇ ವೇಳೆ ಸರ್ವೋದಯ ಮಹಿಳಾ ಮಂಡಳದಿಂದ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು. ತರಬೇತಿ ಪಡೆದ ಮಹಿಳೆಯರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುವತಿಯರು ಪ್ರಿಯಾಂಕಾ ಅವರೊಂದಿಗೆ ಸೆಲ್ಪಿ ತೆಗೆಸಿಕೊಳ್ಳಲು ಮುಗಿಬಿದ್ದರು.
ಹತ್ತರಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾತ್ರೋಟ, ಚನ್ನಮ್ಮ ಮೊಕಾಶಿ, ದ್ರಾಕ್ಷಾಯಿಣಿ ಯೇಶಿ, ಶರಣವ್ವ ಬನೆಪ್ಪಗೋಳ, ರವಿ ಜಿಂದ್ರಾಳಿ, ಈರಣ್ಣ ಬಿಸಿರೊಟ್ಟಿ ಸೇರಿ ಮಹಿಳಾ ಮಂಡಳದ ಸದಸ್ಯರು ಹಾಗೂ ಇನ್ನಿತರರು ಇದ್ದರು.










