ದೇಶ ಕಟ್ಟುವವರು ಸೈನಿಕರು, ರೈತರು, ಸಚಿವ ಶ್ರೀಮಂತ ಪಾಟೀಲ
- 14 Jan 2024 , 10:41 PM
- Belagavi
- 131
ಬೆಳಗಾವಿ : ದೇಶವನ್ನು ಕಟ್ಟುವವರು ಸೈನಿಕರು ಹಾಗೂ ರೈತರು ಅಲ್ಪ ಸಂಖ್ಯಾತ ಇಲಾಖೆಯ ಸಹಯೋಗದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಉನ್ನತಮಟ್ಟದ ಅಧಿಕಾರಿಯಾಗಬೇಕೆಂದು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ಶ್ರೀಮಂತ ಪಾಟೀಲ ಹೇಳಿದರು. ಶನಿವಾರ ಬೆಳಗುಂದಿಯ ಅಲ್ಪ ಸಂಖ್ಯಾತ ಇಲಾಖೆಯ ಸಹಯೋಗದಲ್ಲಿ ಇಂಡಿಯನ್ ಐ ಸೆಕ್ಯೂರಿಟಿ ಕೇಂದ್ರದ ತರಬೇತಿಯ 166 ಅಭ್ಯರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.


ಅಲ್ಪಸಂಖ್ಯಾತ ಇಲಾಖೆಯ ಸಹೋಗದಲ್ಲಿ ಇಂಡಿಯನ್ ಐ ಸೆಕ್ಯೂರಿಟಿ ಕೇಂದ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಮುಂದೆ ದೇಶ ಕಾಯುವ ಯೋಧರಾಗಬೇಕು. ನಮ್ಮಇಲಾಖೆಯಲ್ಲಿ ಸಾಕಷ್ಟು ಯೋಜನೆಗಳನ್ನು ನೀಡುತ್ತೇವೆ. ಆದರೆ ಉಚಿತ ತರಬೇತಿ ನೀಡಿ ಅಭ್ಯರ್ಥಿಗಳಿಗೆ ಸಹಾಯಧನ ನೀಡುತ್ತೇವೆ. ಅದು ಸಾರ್ಥಕವಾಯಿತು.

ಮುಂದೆ ಪ್ರತಿಯೊಬ್ಬರು ದೇಶ ಕಾಯುವ ಯೋಧರಾಗಬೇಕೆಂದು ಕರೆ ನೀಡಿದರು. ಅಲ್ಪ ಸಂಖ್ಯಾತ ಇಲಾಖೆಯ ಅಧಿಕಾರಿ ಗೋಪಾಲ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಉತ್ತರ ಭಾಗದ ಅಭ್ಯರ್ಥಿಗಳಿಗೆ ತರಬೇತಿ ನೀಡಬೇಕು ಎನ್ನುವುದು ಸರಕಾರದ ಮಹದಾಸೆಯಾಗಿತ್ತು. ಇದಕ್ಕೆ ಅಲ್ಪ ಅಸಂಖ್ಯಾತ ಇಲಾಖೆ ಸಚಿವರ ಶ್ರಮ ಸಾಕಷ್ಟಿದೆ ಎಂದರು.

ಜನೇರವರಿಯಲ್ಲಿ ಬೆಳಗಾವಿಯಲ್ಲಿ ನಡೆದ ಸೈನಿಕ ರ್ಯಾಲಿಯಲ್ಲಿ ತರಬೇತಿ ಪಡೆದ 16 ಜನ ಆಯ್ಕೆಯಾಗಿದ್ದಾರೆ. ಉಡುಪಿಯಲ್ಲಿ ನಡೆಯುವ ರ್ಯಾಲಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದರೆ ಮುಂದೆ ರಾಜ್ಯದಲ್ಲಿಯೂ ಹೆಚ್ವಿನ ತರಬೇತಿ ತೆರೆಯಲು ಉತ್ಸಾಹ ಬರುತ್ತದೆ ಎಂದು ಭರವಸೆ ನೀಡಿದರು.
ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ನಿರ್ದೇಶಕ ಮೆಹಬೂಬ್ ಪಾಶಾ ಮಾತನಾಡಿ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯಿಂದ ದೇಶ ಸೇವೆ ಮಾಡಲು ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸರಕಾರ ಚಿಂತನೆ ನಡೆಸಿತ್ತು. ಇದರಲ್ಲಿ166 ವಿದ್ಯಾರ್ಥಿಗಳು ತರಬೇತಿ ಮುಗಿಸಿ ದೇಶ ಸೇವೆಗೆ ಅಣಿಯಾಗುತ್ತಿರುವ ಸೈನಿಕ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.
ಅಲ್ಪ ಸಂಖ್ಯಾತ ಇಲಾಖೆಯ ಸಹಯೋಗದಲ್ಲಿ ಇಂಡಿಯನ್ ಐ ಸೆಕ್ಯೂರಿಟಿ ಕೇಂದ್ರದ ತರಬೇತಿ ಪಡೆದ ಅಭ್ಯರ್ಥಿಗಳು ಶಿಸ್ತಿನ ಶಿಪಾಯಿಗಳು ಇಲ್ಲಿ ನೀಡವ ತರಬೇತಿ ನಿಮಗೆ ಭದ್ರ ಬುನಾದಿಯಾಗಲಿದೆ. ದೈರ್ಯದಿಂದ ನೀವು ದೇಶ ಸೇವೆ ಮಾಡಬೇಕೆಂದು ಕರೆ ನೀಡಿದರು. ಅಲ್ಪ ಸಂಖ್ಯಾತ ನಿಮಗ ಮಂಡಳಿ ಅಧ್ಯಕ್ಷ ಮುಕ್ತಾರ ಹುಸೇನ ಪಠಾನ ಮಾತನಾಡಿ, ಬೆಳಗುಂದಿಯ ತರಬೇತಿ ಕೇಂದ್ರಕ್ಕೆ ಬಂದರೆ ಮಿಲಿಟರಿ ಕೇಂದ್ರಕ್ಕೆ ಬಂದ ಹಾಗೆ ಅನುಭವವಾಗುತ್ತಿದೆ.
ದೇಶ ಭಕ್ತಿಯ ವಾತಾವರಣ ನಿರ್ಮಾಣ ಮಾಡಿದ್ದಾರೆ. ತರಬೇತಿ ಪಡೆದ ಅಭ್ಯರ್ಥಿಗಳ ಪರವಾಗಿ ಕರ್ನಾಟಕ ಹಾಗೂ ದೇಶ ಪ್ರಧಾನಿ ಮೋದಿ ಸರಕಾರ ಬದ್ದವಾಗಿದೆ ಎಂದರು. ಅಶಿಸ್ತಿನಿಂದ ಕೂಡಿದ ನಾವು ಲಾಕ್ ಡೌನ್ ಸಂದರ್ಭದಲ್ಲಿ ತಿರುಗಾಡಿಕೊಂಡು ಇರುತ್ತಿದ್ದೇವು. ಆದರೆ ಅಲ್ಪ ಅಸಂಖ್ಯಾತ ಇಲಾಖೆ ಹಾಗೂ ಐ ಸೆಕ್ಯೂರಿಟಿ ಕೇಂದ್ರದ ಉತ್ತಮ ತರಬೇತಿಯಿಂದ ನಮಗೆ ಶಿಸ್ತು ಕಲಿಸಿಕೊಟ್ಟಿದ್ದು ನಮ್ಮೆಲ್ಲರ ಹೆಮ್ಮೆ ಎಂದರು. ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಸಮಾಜವನ್ನು ಕಟ್ಟಲು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮಹದಾಸೆಯನ್ನು ಇಲ್ಲಿನ ಎಲ್ಲ ಅಭ್ಯರ್ಥಿಗಳು ಹೊಂದಿದ್ದಾರೆ. ದೇಶದ ಯಾವುದೇ ಭಾಗಕ್ಕೆ ಹೋದರೂ ದೇಶ ಸೇವೆ ಮಾಡಲು ಈ ತರಬೇತಿ ಕೇಂದ್ರದಲ್ಲಿ ಕಲಿಸುತ್ತಾರೆ ಎಂದು ತಮ್ಮ ಮನದಾಳದ ಮಾತನನ್ನು ಹೇಳಿದರು.
ಬಿಜೆಪಿ ಮುಖಂಡ ರಾಜಕುಮಾರ ಟೋಪಣ್ಣವರ, ವಿಜಯ ತೋರಗಲ, ವಿಜಯ ಗೋಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










