ಹಿಂದೂ ಧರ್ಮದ ಬಗ್ಗೆ ಅವಮಾನ ಬೇಡ: ಹುಕ್ಕೇರಿ ಶ್ರೀಗಳು

ಬೆಳಗಾವಿ :ಹಿಂದೂ ಧರ್ಮಕ್ಕೆ ಅವಮಾನ ಮಾಡುವುದು ಬೇಡಾ. ದೇವರ ಪೋಟೋ ವಿಸರ್ಜನೆ ಮಾಡುವಾಗ ನಮ್ಮ ಜನರಿಗೆ ತಿಳುವಳಿಕೆ ಬರಬೇಕು ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಬುಧವಾರ ನಗರದ ಹೊರ ವಲಯದಲ್ಲಿರುವ ಹೊನಗಾ ಮಾರ್ಕಂಡೇಯ ನದಿಯ ದಡದಲ್ಲಿ ಸಾಮಾಜಿಕ ಕಾರ್ಯಕರ್ತ ವೀರೇಶ ಹಿರೇಮಠ ನೇತೃತ್ವದ ತಂಡ ಮರ, ರಸ್ತೆಯ ಬದಿಯಲ್ಲಿಡಲಾದ ದೇವರ ಪೋಟೋಗಳ ವಿಸರ್ಜನೆಯ ಪೂಜೆ ನೆರವೆರಿಸಿ ಮಾತನಾಡಿದರು.

promotions

ದೇವರುಗಳ ಬಗ್ಗೆ ಹಿಂದೂಗಳಿಗೆ ಅಪಾರ ಗೌರವ. ಆದರೆ ಆ ದೇವರ ಪೋಟೋಗಳನ್ನು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಜನರು ಮುಕ್ಕಾದ ಪೋಟೋಗಳನ್ನು ಇಡುವುದರಿಂದ ದೇವರಿಗೆ ಅಪಮಾನ ಮಾಡಿದ್ದಂತಾಗುತ್ತದೆ. ಕರ್ನಾಟಕ, ಮಹಾರಾಷ್ಟ್ರದ ಮರ ಹಾಗೂ ನದಿಯ ದಡದಲ್ಲಿಟ್ಟು ಪೋಟೋಗಳನ್ನು ಸಂಗ್ರಹಿಸಿ ವಿಧಿ ವಿಧಾನದೊಂದಿಗೆ ವಿಸರ್ಜನೆ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು. ಒಡೆದ ಪೋಟೋಗಳು ಮನೆಯಲ್ಲಿ ಇರಬಾರದು ನಿಜಾ.

promotions

ಆದರೆ ಅದನ್ನು ವಿಸರ್ಜನೆ ಮಾಡುವ ಪದ್ದತಿ ಇರುತ್ತದೆ. ವಿನಾಕಾರಣ ಸಾರ್ವಜನಿಕರು ಕುಳಿತುಕೊಳ್ಳುವ ಜಾಗೆಯಲ್ಲಿ ಪೋಟೋ ಇಟ್ಟು ದೇವರಿಗೆ ಅವಮಾನ ಮಾಡುವುದು ಸರಿಯಲ್ಲ. ಪೋಟೊ ಎಸೆಯುವ ಬದಲು ಸರ್ವಲೋಕಾ ಫೌಂಡೇಶನ್ ಗೆ ಕರೆ ಮಾಡಿದರೆ ಅವರು ವ್ಯವಸ್ಥಿತವಾಗಿ ವಿಸರ್ಜನೆ ಮಾಡುತ್ತಾರೆ ಎಂದರು. ಧಾರ್ಮಿಕ ದತ್ತಿ ಇಲಾಖೆಯವರು ಸಹ ಬೇಕಾಬಟ್ಟಿ ಪೋಟೊಗಳನ್ನು ಎಸೆಯುವವರಿಗೆ ತಿಳುವಳಿಕೆ ನೀಡಬೇಕು.

ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರಕ್ಕವಾಗುತ್ತದೆ. ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕೆಂದು ಸಲಹೆ‌ ನೀಡಿದರು. ವೀರೇಶ ಹಿರೇಮಠ ಮಾತನಾಡಿ,ಮಹಾರಾಷ್ಟ್ರ, ಕೊಲ್ಲಾಪುರ, ಬೆಳಗಾವಿ ನಗರ ಮರ ಹಾಗೂ ನದಿಯ ದಡದಲ್ಲಿ ದೇವರ ಪೋಟೋವನ್ನು ಸಾರ್ವಜನಿಕರು ಇಟ್ಟಿರುವುದನ್ನು ಕಂಡು ಸರ್ವ ಲೋಕಾ ಫೌಂಡೇಶನ್ ವತಿಯಿಂದ ತಂಡ ರಚನೆ ಮಾಡಿ ದೇವರ ಪೋಟೋ ಸಂಗ್ರಹಿಸಿ ಶ್ರೀಗಳ ಹಸ್ತದಿಂದ ಅವುಗಳನ್ನು ವಿಸರ್ಜನೆ ಮಾಡಿಸಿದ್ದು ಹೆಮ್ಮೆಯ ಸಂಗತಿ ಎಂದರು. ಧರ್ಮ ಉಳಿದರೆ ದೇಶ ಉಳಿಯುತ್ತದೆ. ಮನುಕುಲಕ್ಕೆ ಅವಮಾನ ಮಾಡುವುದು ಸಲ್ಲದು.

ದೇವರ ಪೋಟೋವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಅದನ್ನು ಸುಸಜ್ಜಿತವಾಗಿ ವಿಸರ್ಜನೆ ಮಾಡಬೇಕೆಂದು ಕರೆ ನೀಡಿದರು. ಐ.ಎಸ್.ಗಾಲಿಮಠ, ನಾಗೇಶ ದೇಸಾತಿ, ಗ್ರಾಪಂ ಸದಸ್ಯ ಯಲ್ಲೋಜಿ ಪಾಟೀಲ, ರಾಮನೀಲಜಕರ, ಮಹೇಶ ರೆಡ್ಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles