ಗೋಕಾಕನಲ್ಲಿ ಹೆಚ್ಚಿದ ಸಚಿವ ರಮೇಶ ಜಾರಕಿಹೊಳಿ ರಾಜೀನಾಮೆಗೆ ಒತ್ತಾಯ
- 14 Jan 2024 , 10:00 PM
- Belagavi
- 109
ಬೆಳಗಾವಿ:ಕನಾ೯ಟಕ ಸರಕಾರದ ಭಾರತೀಯ ಜನತಾ ಪಕ್ಷದ ಪ್ರಭಾವಿ ಮುಖಂಡ ಜಲ ಸಂಪನ್ಮೂಲ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದಾದ್ಯಂತ ಟಿ ವಿ ಮಾಧ್ಯಮಗಳಲ್ಲಿ ಅವರ ರಾಸಲೀಲೆ ಚಿತ್ರ ಹಾಗೂ ವಿಡಿಯೋ ಪ್ರಕಟವಾಗಿದು ಒಬ್ಬ ಉನ್ನತ ಮಟ್ಟದ ಸರಕಾರದ ಜವಾಬ್ದಾರಿ ಸಚಿವರ ಈ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ ತಾಲೂಕಿನ ಜೆ.ಡಿ.ಎಸ್ ಪಕ್ಷದ ಮುಖಂಡರಾದ ಅಶೋಕ ಪೂಜಾರಿ ಹಾಗೂ ಬೆಂಬಲಿಗರು ಇಂದು ನಗರದ ಶ್ರೀ ಬಸವೇಶ್ವರ ವ್ರತ್ತದಲ್ಲಿ ಸಿಡಿ ಪ್ರಕರಣದಲ್ಲಿ ಸಿಲುಕಿರುವ ರಮೇಶ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ನೈತಿಕ ಜವಾಬ್ದಾರಿಯನ್ನು ಹೊತ್ತು ಈ ಕೂಡಲೇ ರಾಜಿನಾಮೆ ಸಲ್ಲಿಸಬೆಕೇಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.












