ಸಾರಾಯಿ ಅಂಗಡಿ ಬಂದ ಮಾಡುವಂತೆ ವಿವಿಧ ಮಹಿಳಾ ಸಂಘಗಳಿಂದ ಒತ್ತಾಯ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಮನಿಹಾಳ ಸುರೇಬಾನ ಗ್ರಾಮದಲ್ಲಿ ಇತಿಚಿಗೆ ಮದ್ಯದ ಅಂಗಡಿ ಬಂದ ಮಾಡಬೇಕೆಂದು ಒತ್ತಾಯಿಸಿ ವಿವಿಧ ಮಹಿಳಾ ಸಂಘಗಳು ಒತ್ತಾಯ ಮಾಡಿದ್ದಾರೆ. ಮನಿಹಾಳ ಸುರೇಬಾನ ಗ್ರಾಮದಲ್ಲಿ ಎರಡು ಮದ್ಯದ ಅಂಗಡಿಗಳು ಇವೆ ಕುಡುಕರಿಂದ ಕೆಲವು ಸಂದರ್ಭದಲ್ಲಿ ಮಹಿಳೆಯರು ಅಡ್ಡಾಡುವುದು ಮತ್ತು ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ಹಾಗೂ ಹಲವಾರು ಕುಟುಂಬಗಳಲ್ಲಿ ಮಕ್ಕಳು ಮರಿಗಳಿಗೆ ತೊಂದರೆ ಕೊಡುತ್ತಿರುವುದರಿಂದ ಕಿರುಕುಳ ಅನುಭವಿಸುವ ಪರಿಸ್ಥಿತಿ ಒದಗಿ ಬರುತ್ತಿದೆ. ರಾಮದುರ್ಗ ತಾಲೂಕಿನ ಮನಿಹಾಳ ಸುರೇಬಾನದ ಸುತ್ತಮುತ್ತಲಿನ 20 ಗ್ರಾಮಗಳ ಸಾರ್ವಜನಿಕ ಮಹಿಳೆಯರ ವತಿಯಿಂದ ಪೊಲೀಸರಿಗೆ ಮನವಿ ಮಾಡಿದ್ದಾರೆ. ನಿತ್ಯ ಗ್ರಾಮದಲ್ಲಿ ಸಾರಾಯಿ ಕುಡಿತದಿಂದ ಸಾಕಷ್ಟು ಕುಟುಂಬದಲ್ಲಿ ಕಲಹಗಳು ಉಂಟಾಗಿ ಶಾಂತಿ ನೆಮ್ಮದಿ ಇಲ್ಲದೆ ಜೀವನ ಮಾಡುವುದು ಕಠಿಣವಾಗಿದೆ. ಇದರಿಂದ ಭವಿಷ್ಯದಲ್ಲಿ ಸಂತೋಷದ ಜೀವನ ನಡೆಸುವುದು ಕಷ್ಟಕರವಾದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಘಟಕ ಸಂಪನ್ಮೂಲ ವ್ಯಕ್ತಿ ಮಹಿಳಾ ಸಾಮಕ್ಯ ಬಸಮ್ಮ ಗೋರಾಬಾಳ ಸಾರಾಯಿ ಕುಡಿತದಿಂದ ಸಾಕಷ್ಟು ಕುಟುಂಬಗಳು ಬೀದಿಪಾಲಾಗಿವೆ. ಇದರಿಂದ ವೃದ್ಧ ರಿಗೆ ಸಣ್ಣ ಮಕ್ಕಳಿಗೆ ಬಹಳ ತೊಂದರೆ ಉಂಟಾಗಿ ಜೀವನ ಹಾಳಾಗಿದೆ ಸರಾಯಿ ಅಂಗಡಿಗಳನ್ನು ಬಂದ್ ಮಾಡದಿದ್ದರೆ ಉಗ್ರವಾದ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಸಿದರು. ಗೀರಿಜವ್ವ ಹಡಪದ ಮಾತನಾಡಿ ನಮ್ಮ ಮನೆಯಲ್ಲಿ ಕುಡಿದು ಬಂದು ನಮ್ಮನ್ನು ಹೋಡೆಯುವುದು ಬಡೆಯುವುದು ಮಾಡುತ್ತಾರೆ ಇದರಿಂದ ನಾವು ವಿಷ ತೆಗೆದುಕೊಂಡು ಸಾಯುವ ಪರಿಸ್ಥಿತಿ ಬಂದಿದೆ ಎಂದು ನೋವಿನ ಮಾತುಗಳನಾಡಿದ್ದಾರೆ ಈ ಸಂದರ್ಭದಲ್ಲಿ ತಾಲೂಕಿನ ರೈತ ಮಹಿಳಾ ಅಧ್ಯಕ್ಷೆ ಸುಮಿತ್ರಾ ಹನಮನೇರಿ ಮಾತನಾಡಿ ಸರಾಯಿ ಅಂಗಡಿ ಬಂದ್ ಮಾಡುವವರೆಗೂ ನಿರಂತರವಾದ ಹೋರಾಟ ವನ್ನು ಮಾಡುತ್ತ ಬಂದಿದೆವೆ ಮಹಿಳಾ ಸಂಘಗಳಿಂದ ಧರಣಿ ಕೂಡಲು ಸಿದ್ದರಾಗಿದ್ದೆವು ಈ ಸಂದರ್ಭದಲ್ಲಿ ಕೋರೂಣ ವೈರಸ್ ಇರುವುದರಿಂದ ಧರಣಿಗೆ ಅವಕಾಶ ಇಲ್ಲವೆಂದು ಪೋಲಿಸ್ ಇಲಾಖೆಯಿಂದ ನೋಟೀಸ್ ಬಂದ ಕಾರಣ ಸದ್ಯದ ಮಟ್ಟಿಗೆ ಧರಣಿಯನ್ನು ಕೈಬಿಡಲಾಗಿದೆ ಇಷ್ಟೇ ಅಲ್ಲದೇ ನಾವು ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ವನ್ನು ಮಾಡುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ರಾಮದುರ್ಗ ಸಿಪಿಐ ಲಖನ್ ಮಸಗುಪ್ಪಿ ಕೋರೊನಾ ಇರುವುದರಿಂದ ಧರಣಿ ,ಪ್ರತಿಭಟನೆಗೆ ಅವಕಾಶ ಇಲ್ಲ. ಅಕ್ರಮವಾಗಿ ಸರಾಯಿ ಮಾರಾಟ, ಮಾವಾ ಮಾರಾಟ ಮಾಡುವವರು ಕಂಡು ಬಂದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೆವೆ ಇಷ್ಟೇ ಅಲ್ಲದೆ ಯಾವುದೇ ಕುಟುಂಬದಲ್ಲಿ ಕುಡಿದು ಬಂದು ಕಿರುಕುಳ ನೀಡಿದರೆ ನಮ್ಮ ಗಮನಕ್ಕೆ ತರಬೇಕೆಂದು ಹೇಳಿದ್ದಾರೆ. ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ವಿ. ಕರಿಗಾರ ಮಾತನಾಡಿ ಸರಾಯಿ ಮುಕ್ತ ಗ್ರಾಮಮಾಡಬೇಕು ಅಂತಾ ನಮ್ಮ ಉತ್ತರ ಕರ್ನಾಟಕ ಭಾಗದಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳುತ್ತಾ ಬಂದಿದೆವೆ ಇದನ್ನು ಸರ್ಕಾರ ಆದಷ್ಟೂ ಬೇಗ ಈಡೇರಿಸಬೇಕು ಇಲ್ಲದಿದ್ದರೆ ಇದು ಇನ್ನೂ ಉಗ್ರವಾದ ರೂಪ ಪಡೆದುಕೊಳ್ಳುತ್ತದೆ ಎಂದರು
ಈ ಸಂದರ್ಭದಲ್ಲಿ ರೈತ ಮಹಿಳೆಯರಾದ ಗಂಗಮ್ಮ ಬನಸೋಡಿ, ಯಲ್ಲಮ್ಮ ಮೋಟೆ, ಗೀರಿಜ್ಜವ್ವಾ ಶೇಲಿಕೇರಿ, ಮಲ್ಲವ್ವಾ ನೇಸರಗಿ, ಯಲ್ಲವ್ವ ಹನಮನೇರಿ, ಸಾವಿತ್ರಿ ಭಜಂತ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

Read More Articles