ಬೆಳಗಾವಿ: ರಾಜ್ಯದ ವಿಧಾನ ಪರಿಷತ್ ಚುನಾವಣೆ ಇದೆ ಜೂನ್ 29ರಂದು ಚುನಾವಣೆ ನಡೆಯಲಿದೆ. ಈ ಸಂಬಂಧ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಜೆಡಿಎಸ್ ಕೂಡಾ ಪೈಪೋಟಿ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಂದು ಜೆಡಿಎಸ್ ನಾಯಕರು ಮಹತ್ವದ ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಪಕ್ಷದ ಪ್ರಧಾನ ಕಛೇರಿ ಜೆ.ಪಿ. ಭವನದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯಲಿರುವ ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಮುಖಂಡರು ತೀರ್ಮಾನಿಸಿದ್ದಾರೆ. ಆದರೆ ಬೆಳಗಾವಿ, ಉತ್ತರ ಕರ್ನಾಟಕ ಸೇರಿದಂತೆ ಬಹುತೇಕ ಕಡೆ ಜೆಡಿಎಸ್ ನೆಲ ಕಚ್ಚಿದೆ ಮತ್ತೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಗಟ್ಟಿಗೊಳಿಸ ಬೇಕಾದರೆ ಗೋಕಾಕನ ಅಶೋಕ ಪೂಜಾರಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಈ ಭಾಗದಲ್ಲಿ ಕೇಳಿ ಬರುತ್ತಿದೆ. ಒಂದು ವೇಳೆ ಅವರಿಗೆ ಬಿಟ್ಟು ಇನ್ಯಾರಿಗಾದರು ಕೊಟ್ಟರೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಅಸ್ತಿತ್ವ ಅಂತು ಉಳಿಯುದಿಲ್ಲಾ ಎಂಬ ಮಾತುಗಳು ಇಲ್ಲಿ ಕೇಳಿ ಬರುತ್ತಿವೆ. ಉತ್ತರ ಕರ್ನಾಟಕದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎನ್ನುವದು ಪಕ್ಷದ ಮುಖಂಡರು ಮಾಡಬೇಕು. ಜೆಡಿಎಸ್ ನಿಂದ ಯಾರೇ ಟಿಕಟ್ ಗಾಗಿ ಲಾಭಿ ನಡೆಸಿದರು ಅಶೋಕ ಪೂಜಾರಿಯವರನ್ನು ಮಾತ್ರ ಕಡೆಗಣಿಸ ಬಾರದು ಎಂದು ಬೆಳಗಾವಿ ಜೆಡಿಎಸ್ ಗ್ರಾಮೀಣ ಕ್ಷೇತ್ರದ ಅಧ್ಯಕ್ಷ ಸಿದ್ದನಗೌಡ್ ಪಾಟೀಲ್ ಹೇಳುತ್ತಾರೆ. ಇಂದು ಜೆಡಿಎಸ್ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಹೆಸರು ಬಹುತೇಕ ಅಂತಿಮವಾಗಲಿದೆ ಎಂಬ ಉನ್ನತ ಮೂಲಗಳು ಮಾಹಿತಿಗಳು ಕೇಳಿ ಬರುತೇವೆ.