ಬೆಳಗಾವಿಯಲ್ಲಿ ಮತ್ತೇ ಕ್ಯಾತೆ ತೆಗೆದ ಎಂಇಎಸ್, ಶಿವಸೇನೆ
- 26 Dec 2023 , 9:26 AM
- Belagavi
- 126
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಎದುರುಗಡೆ ಕನ್ನಡ ಹೋರಾಟಗಾರರು ಅಳವಡಿಸಿರುವ ಅನಧಿಕೃತ ಕನ್ನಡ ಧ್ವಜ ತೆರವು ಮಾಡಿ ಇಲ್ಲ, ಅಲ್ಲಿ ಭಾಗವಾ ಧ್ವಜ ಹಾಕಲು ಅವಕಾಶ ನೀಡಿ ಎಂದು ಆಗ್ರಹಿಸಿ ಬೋಗಾರವೆಸ್ ನಿಂದ ಎಂಇಎಸ್ ಹಾಗೂ ಶಿವಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರದಾರ್ಸ್ ಮೈದಾನದವರೆಗೆ ಬೃಹತ್ ರ್ಯಾಲಿ ನಡೆಸಿದರು.

ನಗರದ ಸಂಭಾಜಿ ವಲಯದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಎಂಇಎಸ್ ಮುಖಂಡರಾದ ದೀಪಕ ದಳಿವಿ, ಶುಭಂ ಶೇಳಕೆ, ಪ್ರಕಾಶ ಶಿರೋಳಕರ್ ಅವರು ಮಾಲಾರ್ಪಣೆ ಮಾಡಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡದರು. ಬಳಿಕ ಪ್ರತಿಭಟನಾ ಮೆರವಣಿಗೆ ಕಾಲೇಜು ರಸ್ತೆಯ ಮಾರ್ಗವಾಗಿ ಸರದಾರ್ಸ್ ಮೈದಾನದವರೆಗೂ ಜರುಗಿತು.











