ರಮೇಶ ಜಾರಕಿಹೊಳಿ ಪ್ರಕರಣ ಸರಕಾರ ಉನ್ನತಮಟ್ಟದ ತನಿಖೆ ನಡೆಸಲಿ: ಪೂಜಾರಿ

ಬೆಳಗಾವಿ :ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಅವರು ನಕಲಿ ಸಿಡಿ ಇದರ ಷಡ್ಯಂತ್ರ ‌ನಡೆಸುವವರ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಈ‌ ವಿಷಯ ಕುರಿತು ಅವರು ರಾಜೀನಾಮೆ ನೀಡಿದ್ದಾರೆ. ಸರಕಾರ ಸಂಪೂರ್ಣ ಉನ್ನತಮಟ್ಟದ ತನಿಖೆ ಮಾಡಬೇಕು ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಆಗ್ರಹಿಸಿದರು.

promotions

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಮೇಶ ಜಾರಕಿಹೊಳಿ‌ ಅವರು ಹಿರಿಯ ಸಚಿವರಾಗಿದ್ದವರು. ಅಂಥವರ ವಿರುದ್ದ ಷಡ್ಯಂತ್ರ ನಡೆಸಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಆ ಸಿಡಿಯನ್ನು ಸರಕಾರ ಎಫ್ ಎಸ್ ಎಲ್ ಮೂಲಕ ಪರೀಕ್ಷೆ ಕಳುಹಿಸಿ ತನಿಖಾ ವರದಿಯಲ್ಲಿ ಅದು ನಕಲಿ ಎಂದು ವರದಿ ಬಂದರೆ ಅವರಿಗೆ ಮತ್ತೇ ಸಚಿವ ಸ್ಥಾನ ಕೊಡಲಿ. ನಕಲಿ ಅಲ್ಲ ಎಂದರೆ ಅದರ ಬಗ್ಗೆ ಸತ್ಯಾಸತ್ಯತೆ ಹೊರ ಬರಲಿ ಎಂದು ಅಶೋಕ ಪೂಜಾರಿ ಒತ್ತಾಯಿಸಿದರು.

promotions

Read More Articles