ಕಲ್ಲಳ್ಳಿ ವಿರುದ್ದ ಪ್ರಕರಣ ದಾಖಲಿಸುವಂತೆ ಆಗ್ರಹ

ಬೆಳಗಾವಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರುದ್ದ ಷಡ್ಯಂತ್ರ ನಡೆಸಿ ನಕಲಿ ವಿಡಿಯೋ ಮಾಡಿದ್ದನ್ನು ಪೊಲೀಸರಿಗೆ ದೂರು ನೀಡಿರುವ ದಿನೇಶ ಕಲ್ಲಳ್ಳಿ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು.

promotions

ಕರ್ನಾಟಕ ಸರಕಾರದ ಪ್ರಭಾವಿ ಮಾಜಿ ಸಚಿವರಾದ ರಮೇಶ ಜಾರಕಿಹೊಳಿ ಅವರ ವಿರುದ್ದ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಳ್ಳಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಹಾಗೂ ನಕಲಿ ರಾಸಲೀಲೆ ಸಿಡಿ ಇಟ್ಟುಕೊಂಡು ಬೆಂಗಳೂರಿನ ಕಬ್ಬನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಮನವಿಯಲ್ಲಿ ಖಂಡಿಸಿದ್ದಾರೆ‌. ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಳಗಾವಿ ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದ ಪ್ರಭಾವಿ ಸಚಿವರಾಗಿದ್ದರು ಹಾಗೂ ದಲಿತ ಸಮುದಾಯದ ಮಂಚೂಣಿಯ ನಾಯಕರಾಗಿದ್ದರು.

promotions

ಇಂಥ ನಾಯಕನ ವಿರುದ್ದ ನಕಲಿ ರಾಸಲೀಲೆ ವಿಡಿಯೋ ಬಿಡುಗಡೆ ಮಾಡಿ ರಮೇಶ ಜಾರಕಿಹೊಳಿ ಅವರ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿ ಅವರ ಗೌರವಕ್ಕೆ ಧಕ್ಕೆ ತಂದಿರುವ ದಿನೇಶ ಕಲ್ಲಳ್ಳಿ ವಿರುದ್ದ ಕೂಡಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ದೌರ್ಜನ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಲ್ಲಳ್ಳಿಯನ್ನು ಬಂಧಿಸಬೇಕೆಂದು ಮನವಿಯಲ್ಲಿ ಆಗ್ರಹಿದರು. ದಿನೇಶ ಕಲ್ಲಳ್ಳಿ ಬಿಡುಗಡೆ ಮಾಡಿರುವ ರಾಸಲೀಲೆ ಸಿಡಿ ಇವರ ಕೈಗೆ ಹೇಗೆ ಬಂತು.

ಇವರಿಗೆ ಯಾರು ತಂದು ಕೊಟ್ಟರು ಮತ್ತು ಇವರಿಗೆ ಯಾರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೇಳಿದರು. ಮಹಿಳೆಗೆ ಅನ್ಯಾಯವಾಗಿದ್ದರೆ ಯಾಕೆ ಮಹಿಳೆ ಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಿಲ್ಲ ಹಲವು ಅನುಮಾನ ಕಾಡತೋಡಗಿದ್ದು ಕೂಡಲೇ ಅವರ ಮೇಲೆ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಅಲ್ಲದೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮತ್ತೇ ಸಚಿವ ಸ್ಥಾನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಿಕೊಂಡರು.

ಚಂದ್ರಕಾಂತ ಕಾದ್ರೋಳಿ, ತೀರಕಪ್ಪಾ ಚಿಕ್ಕೇರಿ, ಹನುಮಂತಪ್ಪಾ ಹಂಪನಾಳ, ಸುರೇಶ ಮಲಕಿನಕೊಪ್ಪ, ರವೀಂದ್ರ ವಾಳವಿ, ರಾಚಪ್ಪ ಕೆಂಪನ್ನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles