ಶಿವಸೇನೆಗೆ ಪ್ರತ್ಯುತ್ತರ ನೀಡಿದ ಕನ್ನಡಿಗರು

ಬೆಳಗಾವಿ :ಮಹಾರಾಷ್ಟ್ರ ದಲ್ಲಿರುವ ಕನ್ನಡ ನಾಮಫಲಕಗಳಿಗೆ ಮಸಿ ಬಳೆದ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಶಿವಸೇನೆಯ ಕಚೇರಿ ಎದುರಗೆ ನಿಂತಿದ್ದ ಶಿವಸೇನೆಯ ನಾಮಫಲಕವಿದ್ದ ಕಾರ್‌ಗೆ ಮುತ್ತಿಗೆ ಹಾಕಿದ ಕನ್ನಡ ಹೋರಾಟಗಾರರು ನಾಮಫಲಕ ಕಿತ್ತೇಸೆದು ಶಿವಸೇನೆಗೆ ತಕ್ಕ ಪಾಠ ಕಲಿಸಿದ್ದಾರೆ.

promotions

ಹೌದು,  ಗಡಿ ವಿಷಯವನ್ನು ಮುಂದಿಟ್ಟುಕೊಂಡು ಸದಾ ನಾಡದ್ರೋಹಿ ಚಟುವಟಿಕೆ ನಡೆಸಿಕೊಂಡು ಬಂದಿರುವ ಎಂಇಎಸ್‌ಗೆ ಮಹಾರಾಷ್ಟ್ರದಲ್ಲಿ ಶಿವಸೇನೆಯ ಸರಕಾರ ಬಂದಾಗಿನಿಂದ ಬೆಳಗಾವಿಯಲ್ಲಿ ಸದಾ ಒಂದಿಲ್ಲ ಒಂದು ಖ್ಯಾತೆ ತೆಗೆಯುತ್ತ ಬಂದಿದೆ. ಸದ್ಯ ಬೆಳಗಾವಿ ಲೋಕಸಭಾ ಉಪಚುನಾವಣೆ ಇರುವುದರಿಂದ ಬಹುತೇಕ ಮರಾಠಿಗರು ಈಗ ಎಂಇಎಸ್ ತೊರೆದು ಬಿಜೆಪಿಯತ್ತ ವಾಲಿದ್ದಾರೆ.

promotions

ಇದನ್ನು ನೆಪವಾಗಿಸಿಕೊಂಡಿರುವ ಮಹಾರಾಷ್ಟ್ರದ ಶಿವಸೇನೆಯ ಸರಕಾರ ಬೆಳಗಾವಿಯಲ್ಲಿನ ಲೋಕಸಭಾ ಉಪಚುನಾವಣೆ ಹಾಗೂ ಮಹಾನಗರ ಪಾಲಿಕೆ ಚುನಾವಣೆಯನ್ನು ಗಮನದಲ್ಟಿಕೊಂಡು ಇಂಥ ಕೃತ್ಯ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಬೆಳಗಾವಿಯಲ್ಲಿರುವ ಶಿವಸೇನೆಯ ಕಚೇರಿಯ ಮುಂಭಾಗದಲ್ಲಿ ಶಿವಸೇನೆಯ ಕಾರ್ಯಕರ್ತರು ಪುಂಡಾಡಿಕೆ ಮೆರೆಯುತ್ತಿದ್ದು, ಇವರನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

Read More Articles