ದುರದುಂಡೀಶ್ವರ ಗದ್ದುಗೆಯ ಭೂಮಿಪೂಜೆ ಸಮಾರಂಭಕ್ಕೆ ಚಾಲನೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ
- 17 Dec 2023 , 8:48 PM
- Belagavi
- 177
ಬೆಳಗಾವಿ: ತಾಲೂಕಿನ ಕಡೋಲಿ ದುರದುಂಡೀಶ್ವರ ವಿರಕ್ತಮಠದಲ್ಲಿ ಶುಕ್ರವಾರ ಆಯೋಜಿಸಿದ್ದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ದುರದುಂಡೀಶ್ವರ ಗದ್ದುಗೆಯ ಭೂಮಿ ಪೂಜೆ ಸಮಾರಂಭಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, "ದುರದುಂಡೀಶ್ವರ ವಿರಕ್ತ ಮಠಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಭಕ್ತರು ಹಾಗೂ ಸ್ವಾಮೀಜಿಗಳ ಆಸೆಯಂತೆ ದುರದುಂಡೀಶ್ವರ ಗದ್ದುಗೆಯನ್ನು ನೂತನ ರೂಪದಲ್ಲಿ ನಿರ್ಮಿಸಲಾಗುವುದು" ಎಂದು ಹೇಳಿದರು.

ಕೃಷಿಮೇಳಕ್ಕೆಚಾಲನೆ:
ಇದೇ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಅವರು ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿ ಮೇಳ, ಪಶು ಮೇಳ ಹಾಗೂ ಅನ್ನದಾಸೋಹ ಕೇಂದ್ರವನ್ನು ಉದ್ಘಾಟಿಸಿದರು.
ಡಂಬಳ-ಗದಗ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ನಿಡಸೋಸಿ ದುರದುಂಡೀಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅರಬಾವಿ ದುರದುಂಡೀಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ಕಡೋಲಿ ದುರದುಂಡೀಶ್ವರ ವಿರಕ್ತಮಠದ ಗುರುಬಸವಲಿಂಗ ಸ್ವಾಮೀಜಿ ಭಾಗವಹಿಸಿದ್ದರು.
ಮಾಜಿ ಶಾಸಕ ಸಂಜಯ ಪಾಟೀಲ, ಮುಖಂಡರಾದ ಚಂದ್ರಕಾಂತ ಕೇದಾರಿ, ರಾಮಣ್ಣ ಗುಳ್ಳಿ, ಸಿದ್ದು ಸುಣಗಾರ, ಪ್ರದೀಪ ಶೆಟ್ಟಿ, ಸಿದ್ಧರಾಮಪ್ಪ ಇಟ್ಟಿ, ಪಾಂಡು ಮನ್ನಿಕೇರಿ ಸೇರಿ ಇನ್ನಿತರರು ಇದ್ದರು.










