ದೆಹಲಿಯಲ್ಲಿ ಚಂದ್ರಶೇಖರ ಕಂಬಾರಗೆ ಸ್ವಾಗತಿಸಿಕೊಂಡ ಶಂಕರಗೌಡ ಪಾಟೀಲ
- 14 Jan 2024 , 11:24 PM
- Delhi
- 85
ದೆಹಲಿ : ನವದೆಹಲಿಯ ಕರ್ನಾಟಕ ಸರಕಾರದ ದೆಹಲಿಯ ವಿಶೇಷ ಪ್ರತಿನಿದಿಯ ಕಚೇರಿಗೆ ಭೇಟಿ ನೀಡಿದ ಖ್ಯಾತ ಸಾಹಿತಿ ಡಾ.ಸಿದ್ದಲಿಂಗಯ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡು, ಮಾನ್ಯ ಮುಖ್ಯಮಂತ್ರಿಗಳು ಇತ್ತೀಚೆಗೆ ಮಂಡಿಸಿದ ರಾಜ್ಯ ಮುಂಗಡ ಪತ್ರದ ಪ್ರತಿಯನ್ನು ನೀಡಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಜೂರಾಗಿರುವ ದಕ್ಷಿಣ ಭಾರತದ ಆರು ಭಾಷೆಗಳ ಪ್ರಾಂತೀಯ ಕಚೇರಿಯನ್ನು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸದರಿ ಯೋಜನೆಯ ಅನುದಾನ ಬಿಡುಗಡೆಯ ಬಗ್ಗೆ ಸಾಹಿತಿಗಳ ಬೇಡಿಕೆಗೆ ಸಕಾರತ್ಮಕವಾಗಿ ಸ್ಪಂದಿಸಿ, ಸಂಬಂಧ ಪಟ್ಟ ಇಲಾಖೆಯೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಅನುದಾನ ಬಿಡುಗಡೆಗೆ ಪ್ರಯತ್ನಿಸುವುದಾಗಿ ಭರವಸೆ ನೀಡಿದೆ.











