ಗ್ರಾಪಂ ಸದಸ್ಯರ ಕಾರ್ಯವೈಖರಿ ಮೇಲೆ ಪಕ್ಷದ ಸಂಘಟನೆ ಅವಲಂಭಿತವಾಗಿದೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ

ರಾಮದುರ್ಗ: "ಗ್ರಾಮ ಪಂಚಾಯ್ತಿ ಸದಸ್ಯರ ಕಾರ್ಯವೈಖರಿ ಮೇಲೆ ಪಕ್ಷದ ಸಂಘಟನೆ ಅವಲಂಭಿತವಾಗಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ರಾಮದುರ್ಗ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

promotions

"ಗ್ರಾಪಂ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಸದಸ್ಯರು ಪಕ್ಷ ಸಂಘಟನೆಯೆ ಜೊತೆಗೆ ಗ್ರಾಮದ ಅಭಿವೃದ್ಧಿಗೂ ಶ್ರಮಿಸಬೇಕು. ಅಭಿವೃದ್ಧಿ ಕೆಲಸಗಳ ಮೂಲಕ ತಮ್ಮನ್ನು ಆಯ್ಕೆ ಮಾಡಿರುವ ಜನರ ಪ್ರೀತಿ, ವಿಶ್ವಾಸ ಗಳಿಸಬೇಕು" ಎಂದರು.

promotions

"ಉಪಚುನಾವಣೆ ಜೊತೆಗೆ 2023ಕ್ಕೆ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಗ್ರಾಪಂ ಸದಸ್ಯರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು" ಎಂದು ಕರೆ ನೀಡಿದರು.

ಕೇಂದ್ರದವಿರುದ್ಧವಾಗ್ದಾಳಿ: "ಒಂದು ಕಡೆ ಮೀಸಲಾತಿ ನೀಡುವಂತೆ ಅನೇಕ ಸಮುದಾಯಗಳು ಹೋರಾಟ ಮಾಡುತ್ತಿವೆ. ಆದರೆ, ಕೇಂದ್ರ ಸರ್ಕಾರ ಒಂದೊಂದೆ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಿದೆ. ಹೀಗಾದಾಗ ಮೀಸಲಾತಿ ಸೌಲಭ್ಯ ಲಭಿಸುವುದೇ ಇಲ್ಲ" ಎಂದು ಸತೀಶ ಅಸಮಾಧಾನ ವ್ಯಕ್ತಪಡಿಸಿದರು.

"ಪ್ರಧಾನಿ ಮೋದಿ ಈ ಹಿಂದೆ ರಾಜ್ಯಕ್ಕೆ ಬಂದಾಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಹೀಯಾಳಿಸಿದ್ದರು. ಇಂದು ಅವರದ್ದೇ ಪಕ್ಷದ ರಾಜ್ಯ ಸರ್ಕಾರವನ್ನು ಸ್ವಪಕ್ಷದವರೇ 30 ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದಾರೆ. ಈ ಬಗ್ಗೆ ಮೋದಿ ಉತ್ತರಿಸಬೇಕು" ಎಂದು ಒತ್ತಾಯಿಸಿದರು.

"ಸುಳ್ಳು ಹೇಳಿರುವುದೇ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಇವರು ನೀಡಿದ ಭರವಸೆಗಳೆಲ್ಲ ಹುಸಿಯಾಗಿವೆ. ಕೆಲವು ಅಂಧ ಭಕ್ತರು ಈಗಲೂ ಇವರು ಹೇಳುತ್ತಿರುವ ಸುಳ್ಳುಗಳನ್ನು ನಂಬುತ್ತಿರುವುದಲ್ಲೇದೇ, ಅವುಗಳ ಬಗ್ಗೆ ಪ್ರಚಾರವನ್ನು ಮಾಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 50 ರೂ. ಆಗಿದ್ದಕ್ಕೆ ಸಿಕ್ಕಸಿಕ್ಕಲ್ಲಿ ಪ್ರತಿಭಟನೆ ಮಾಡಿದ್ದ ಬಿಜೆಪಿ ಮುಖಂಡರು,

ಇಂದು ಲೀಟರ್ ಗೆ 100 ರೂ. ತಲುಪಿದ್ದರೂ ಬಾಯಿ ಬಿಡುತ್ತಿಲ್ಲ" ಎಂದು ಟೀಕಿಸಿದರು. ಸದಸ್ಯರಿಗೆ ಸತ್ಕಾರ,

ಕಾಂಗ್ರೆಸ್ಸೇರ್ಪಡೆಯಾದಕಾರ್ಯಕರ್ತರು: ಗ್ರಾಮ ಪಂಚಾಯ್ತಿಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸತೀಶ ಜಾರಕಿಹೊಳಿ ಅವರು ಸನ್ಮಾನಿಸಿ ಅಭಿನಂದಿಸಿದರು. ನೂತನ ಸದಸ್ಯರು ಹಾಗೂ ಕಾರ್ಯಕರ್ತರು ಸತೀಶ ಅವರನ್ನು ಸತ್ಕರಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿಯ ನೂರಾರು ಕಾರ್ಯಕರ್ತರು ಸತೀಶ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾದರು.

ಪಕ್ಷದ ಧ್ವಜ್ವವನ್ನು ನೀಡುವ ಮೂಲಕ ಕಾರ್ಯಕರ್ತರನ್ನು ಬರಮಾಡಿಕೊಳ್ಳಲಾಯಿತು. ಮಾಜಿ ಶಾಸಕ ಅಶೋಕ ಪಟ್ಟಣ, ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಮುಖಂಡರಾದ ಉಮೇಶ ಬ್ಯಾಳಿ, ಜಾಹೂರ ಹಾಜಿ, ಕೃಷ್ಣಾ ಲಮಾನಿ, ವಿಜಯಕುಮಾರ ರಾತೋಡ ಸೇರಿದಂತೆ ಎಲ್ಲ ಗ್ರಾಮ ಪಂಚಾಯತ ಸದಸ್ಯರು, ಪುರಸಭೆ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

Read More Articles