ಶಿವಸೇನೆಗೆ ತಕ್ಕ ಪಾಠ ಕಲಿಸುತ್ತೇವೆ: ಅಶೋಕ ಗುಡುಗು
- 15 Jan 2024 , 2:19 AM
- Belagavi
- 93
ಬೆಳಗಾವಿಯಲ್ಲಿ ಶಿವಸೇನೆ ನಿಷೇಧ ಮಾಡಲು ಕಾನೂನಿನಲ್ಲಿ ಇದೆಯೋ ಇಲ್ಲವೋ ಎನ್ನುವುದು ಸರಕಾರ ಚಿಂತನೆ ಮಾಡಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದರು. ಶನಿವಾರ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುವ ಶಿವಸೇನೆ ಒಂದು ರಾಜಕೀಯ ಪಕ್ಷವಾಗಿರುವುದರಿಂದ ಅದನ್ನು ನಿಷೇಧ ಮಾಡಲು ಅಧಿಕಾರ ಇರುವುದಿಲ್ಲ.

ಅದನ್ನು ನಿಷೇಧ ಮಾಡಲು ಅವಕಾಶ ಇದೆಯೋ ಇಲ್ಲ ಎನ್ನುವುದು ಚರ್ಚೆ ಮಾಡುತ್ತೇವೆ ಎಂದರು. ಬೆಳಗಾವಿಯಲ್ಲಿ ಪುಂಡಾಟಿಕೆ ನಡೆಸುತ್ತಿರುವ ಶಿವಸೇನೆಗೆ ಸರಕಾರದಿಂದ ಎಬಿಸಿಡಿಯಿಂದ ಹಿಡಿದು ಕನ್ನಡ ಅಕ್ಷರ ಮಾಲೆ ಕಲಿಸಿಕೊಟ್ಟು ತಕ್ಕ ಪಾಠ ಕಲಿಸಲಾಗುವುದು ಎಂದು ಖಡಕ ಎಚ್ಚರಿಕೆ ನೀಡಿದರು.











