17 ವರ್ಷದ ಯುವಕನಿಗೆ ಯಶಸ್ವಿ ಹೃದಯ ಕಸಿ ಮಾಡಿದ ಕೆಎಲ್ಇ ಆಸ್ಪತ್ರೆಯ ವೈದ್ಯರು: ಡಾ. ಕೋರೆ

ಬೆಳಗಾವಿ:ಕೆಎಲ್ಇ ಸಂಸ್ಥೆಯಲ್ಲಿ ಮಹತ್ವವಾದ ಎರಡನೇ ಹೆಜ್ಜೆ. ಅತ್ಯಂತ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದ ಸುಮಾರು 17 ವರ್ಷದ ಯುವಕನಿಗೆ ಡಯಲೇಟೆಡ್ ಕಾರ್ಡಿಯೋಮಯೊಪಥಿ ಎಂಬ ರೋಗದಿಂದ ಬಳಲುತ್ತಿದ್ದ ಯುವಕನ ಹೃದಯ ಕಸಿಯನ್ನು ಕೆಎಲ್ ಇ ಆಸ್ಪತ್ರೆ ವೈದ್ಯರು ಯಶಸ್ಚಿಯಾಗಿ ಮಾಡಿದ್ದಾರೆ ಎಂದು ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಹೇಳಿದರು.

promotions

ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪಾಶ್ವ ೯ವಾಯುವಿನಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿ ಕೆಎಲ್ಇ ಹಿರಿಯ ವೈದ್ಯ ಡಾ.ವಿ.ಎ.ಕೋಠಿವಾಲೆ ಅವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಮೆದಳು ತನ್ನ ಕಾರ್ಯವನ್ನು ನಿಲ್ಲಿಸಿತ್ತು. ರೋಗಿಯ ಸಂಬಂಧಿಗಳಿಗೆ ಆಪ್ತ ಸಮಾಲೋಚನೆ ನಡೆಸಿ ಹೃದಯ ದಾನ ಮಾಡಲು ಒಪ್ಪಿಕೊಂಡರು. ನರರೋಗ ತಜ್ಞ ವೈದ್ಯ ಡಾ. ರವಿಶಂಕರ ನಾಯಕ ಹಾಗೂ ಡಾ. ಅಂಬರೀಶ್ ನೇರ್ಲಿಕರ್ ನೇತೃತ್ವದಲ್ಲಿ ಯಶಸ್ವಿ ಹೃದಯ ಕಸಿ ಮಾಡಿದ್ದಾರೆ ಎಂದರು‌.

promotions

ಫೆ.26 ರಂದು 17 ವರ್ಷದ ಯುವಕನಿಗೆ ಕಸಿ ಮಾಡಲಾಯಿತು. ಅರ್ಥೊಟಾಪಿಕ್ ಹೃದಯ ಕಸಿ ಎಂಬ ತಂತ್ರಜ್ಞಾನ ಉಪಯೋಗಿಸಿ ಹೃದಯ ಜೋಡಿಸಲಾಗಿದೆ ಎಂದರು.

ಕೆಎಲ್ಇ ನಿರ್ದೇಶಕ ಡಾ. ವಿ.ಎಸ್.ಸಾಧುನವರ, ಡಾ.ಎಂ.ವಿ.ಜಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read More Articles