ಭ್ರಷ್ಟರಿಗೆ ಶಾಕ್! ಬೆಳ್ಳಂಬೆಳಗ್ಗೆ ಎಸಿಬಿ ದಾಳಿ

ಬೆಳಗಾವಿ: ನಗರದಲ್ಲಿ ಬೆಳಂ ಬೆಳಿಗ್ಗೆ ಎಕಕಾಲಕ್ಕೆ ಎಸಿಬಿ ದಾಳಿ ನಡೆದಿದೆ ಎಸ್ ಪಿ ನೇಮಗೌಡರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌‌. ಭ್ರಷ್ಟಚಾರದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಶಾಕ್ ನೀಡಿದ ಎಸಿಬಿ. ಭ್ರಷ್ಟಚಾರಿಗಳ ಚಳಿ ಬಿಡಸಿದ್ದಾರೆ ಅಸಿಸ್ಟೆಂಟ್ ಕಂಟ್ರೋಲರ ಹಾಗೂ ತೂಕ ಮತ್ತು ಭೂ ಮಾಪನ ಇಲಾಖೆಯ ಅಧಿಕಾರಿ ಸುಭಾಷ್​ ಉಪ್ಪಾರ ಅವರ ಕಚೇರಿ ಹಾಗೂ ಮನೆ, ಸಂಬಂಧಿಗಳ ಮೇಲೆ ಸಹ ಎಸಿಬಿ ಅಧಿಕಾರಿಗಳೂ ದಾಳಿ ನಡೆಸಿದ್ದಾರೆ, ನಗರದ ನಾಲ್ಕು ಬೇರೆ ಬೇರೆ ಕಡೆ ದಾಳಿ ನಡೆದಿದೆ. ನಗರದ ರುಕ್ಮಿಣಿ ನಗರದ ನಿವಾಸ,ಹಾಗೂ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ. ಏಕಕಾಲಕ್ಕೆ ನಾಲ್ಕು ಕಡೆ 30 ಸಿಬ್ಬಂದಿ ತಂಡದಿಂದ ದಾಳಿ ನಡೆದಿದೆ ಬೆಳಗಾವಿಯ ರುಕ್ಮಿಣಿ ನಗರ ಹಾಗೂ ಬಸವನ ಕುಡಚಿಯಲ್ಲಿರುವ ಅಳಿಯ ಸದಾನಂದ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದೆ ಓರ್ವ ಡಿವೈಎಸ್ ಪಿ, ಏಳು ಇನ್ಸ್ಪೆಕ್ಟರ್,20 ಜನ ಸಿಬ್ಬಂದಿಯಿಂದ ಪರಿಶೀಲನೆ ಶುರುವಾಗಿದೆ.

promotions

Read More Articles