ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿಯವರನ್ನು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಮಾಡಲು ಬೆಳಗಾವಿ ಜಿಲ್ಲೆಯ ಕನ್ನಡಪರ ಸಂಘಟನೆಗಳ ಅಗ್ರಹ

ಬೆಳಗಾವಿ : ಬೆಳಗಾವಿ ಹಿರಿಯ ಪತ್ರಕರ್ತ ನೆಲ ಜಲ ಭಾಷೆ ಹೋರಾಟಗಾರ ಹಾಗೂ ಬೆಳಗಾವಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಶ್ರೀ ಅಶೋಕ ಚಂದರಗಿಯವರನ್ನು ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಮಾಡಲು ಬೆಳಗಾವಿ ಜಿಲ್ಲೆಯ ಕನ್ನಡ ಪರ ಸಂಘಟನೆಗಳ ಅಗ್ರಹವಾಗಿದೆ. ಕಳೆದ 35 ವರ್ಷಗಳಿಂದ 1982 ರ ಐತಿಹಾಸಿಕ ಗೋಕಾಕ ಚಳುವಳಿ ಯಿಂದ ಇಲ್ಲಿಯವರೆಗೆ ಎಲ್ಲ ಕನ್ನಡ ಪರ ಹೋರಾಟದಲ್ಲಿ ಚಂದರಗಿಯವರು ತಮ್ಮನ್ನು ತಾವು ತೊಡಗಿಸಿಕೊಂಡವರು‌ ಕೃಷ್ಣಾ ಹಾಗೂ ಮಹದಾಯಿ ನದಿಗಳ ಸಂಭಂದದ ಹೋರಾಟದಲ್ಲಿ ಗಟ್ಟಿಯಾದ ಧ್ವನಿ ಎತ್ತಿರು ಅಶೋಕ ಚಂದರಗಿಯವರು ಒಳ್ಳೆಯ ವಾಗ್ಮಿ ಯಾಗಿದ್ದಾರೆ. ಗಡಿ ನಾಡಿನಲ್ಲಿ ಕನ್ನಡದ ಪ್ರತಿಷ್ಟೆಯನ್ನು ಹೆಚ್ಚಿಸಿದ್ದಾರೆ.

ಜಯಪ್ರಕಾಶ ನಾರಾಯಣ ಪ್ರಭಾವ ಹಾಗೂ ರಾಮಕೃಷ್ಣ ಹೆಗಡೆಯವರ ಒಡನಾಟ ಲೋಕನಾಯಕ ಜಯಪ್ರಕಾಶ ನಾರಾಯಣ ಅವರು ದೇಶವ್ಯಾಪಿ ಆಂದೋಲನವನ್ನು 70 ರ ದಶಕದಲ್ಲಿ ಆರಂಭಿಸಿದಾಗ ಅಶೋಕ ಚಂದರಗಿ ಅವರು ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ವಿದ್ಯಾರ್ಥಿಯಾಗಿದ್ದರು . ಜಿ.ಪಿ. ” ಆಂದೋಲನ ಹಾಗೂ ಅವರ ಸಿದ್ಧಾಂತಕ್ಕೆ ಮಾರುಹೋದ ಇವರು 1977 ರಲ್ಲಿ ಸ್ಥಾಪನೆಯಾದ ಜನತಾ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದರು. 1997 ರಲ್ಲಿ ದಿವಂಗತ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸ್ಥಾಪಿಸಿದ್ದ ಬಿಜೆಪಿ ಯೊಂದಿಗೆ ಕೈ ಜೋಡಿಸಿದ ಸಂದರ್ಭದಲ್ಲಿ , " ಲೋಕಶಕ್ತಿ ” ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿಯೂ ಅಶೋಕ ಚಂದರಗಿ ಅವರು ಕಾರ್ಯನಿರ್ವಹಿಸಿದ್ದಾರೆ .

ಗಡಿ ಭಾಗದ ಕನ್ನಡ ಶಾಲೆಗಳ ಸ್ಥಿತಿಗತಿಯ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸಿ ವರದಿ ಕೊಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು 1999 ಮಾರ್ಚ್ ತಿಂಗಳಲ್ಲಿ ಅಶೋಕ ಚಂದರಗಿ ಅವರ ಅಧ್ಯಕ್ಷತೆಯಲ್ಲಿ " ಚಂದರಗಿ ಸಮಿತಿಯನ್ನು ರಚಿಸಿತ್ತು . ಮೂರು ತಿಂಗಳ ಕಾಲ ಅಧ್ಯಯನ ನಡೆಸಿದ ಚಂದರಗಿ ಸಮಿತಿಯು 1999 ರ ಮೇ 17 ರಂದು ಪ್ರಾಧಿಕಾರಕ್ಕೆ ವರದಿ ಸಲ್ಲಿಸಿ ಅದೇ ವರ್ಷದ ಜೂನ 30 ರಂದು ಪ್ರಾಧಿಕಾರದ ಸಭೆಯಲ್ಲಿ ವರದಿಯು ಅಂಗೀಕಾರವಾಗಿ ಅನುಷ್ಠಾನಕ್ಕಾಗಿ ಸರಕಾರಕ್ಕೆ ಶಿಫಾರಸು ಮಾಡಲ್ಪಟ್ಟಿತು . ಸರಕಾರವು ಈ ವರದಿಯನ್ನು ಗಡಿ ಭಾಗದ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕಳಿಸಿ ಕನ್ನಡ ಶಾಲೆಗಳು ಇರದ ಗಡಿ ಭಾಗದ ಗ್ರಾಮಗಳಲ್ಲಿ ಕನ್ನಡ ಶಾಲೆಗಳನ್ನು ಆದೇಶಿಸಿತು . ಇಂದು ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಇರದ ಹಳ್ಳಿಗಳೇ ಇಲ್ಲ. ಗಡಿ ಬಾಗದಲ್ಲಿ ಕನ್ನಡ ಕಹಳೆಯನ್ನು ಎಬ್ಬಿಸಿದ್ದರು.

ಮಹಾದಾಯಿ ನದಿ ನೀರಿನ ಹಂಚಿಕೆ , ಕೃಷ್ಣಾ ನದಿಯಿಂದ ಮಹಾರಾಷ್ಟ್ರದಿಂದ ನೀರು ಬಿಡುಗಡೆ ವಿಷಯದಲ್ಲಿ ಗಟ್ಟಿಯಾದ ನಿಲುವು ಇವರದ್ದು ಇಂಥಹ ವ್ಯಕ್ತಿತ್ವದ ಶ್ರೀ ಅಶೋಕ ಚಂದರಗಿ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಕಳಿಸಿದರೆ ಉತ್ತರ ಕರ್ನಾಟಕದ , ವಿಶೇಷವಾಗಿ ಗಡಿ ಭಾಗದ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಸಿಗುವದರಲ್ಲಿ ಯಾವುದೇ ಅನುಮಾನವಿಲ್ಲ. ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ , ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಶ್ರೀ ಅಶೋಕ ಚಂದರಗಿ ಅವರನ್ನು ಒಮ್ಮತದಿಂದ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಕಳಿಸುವಲ್ಲಿ ಸರ್ವಾನುಮತದ ನಿರ್ಧಾರಕ್ಕೆ ಬರಬೇಕೆಂದು ನಾವು ಈ ಮೂಲಕ ಆಗ್ರಹಿಸುತ್ತಿದ್ದೇವೆ , ಬೆಳಗಾವಿ ಕನ್ನಡ ಪರ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ನಿಯೋಗವೊಂದು ಶೀಘ್ರವೇ ಬೆಂಗಳೂರಿಗೆ ತೆರಳಲಿದ್ದು ಮೂರೂ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರನ್ನು ಹಾಗೂ ಮುಖ್ಯಮಂತ್ರಿ ,ಉಪಮುಖ್ಯಮಂತ್ರಿಗಳು ಹಾಗೂ ಪ್ರಮುಖ ಸಚಿವರನ್ನು ಭೆಟ್ಟಯಾಗಿ ಶ್ರೀ ಅಶೋಕ ಚಂದರಗಿ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ.

promotions

Read More Articles