ಸಿದ್ದುಗೆ ಟಾಂಗ್ ಕೊಟ್ಟ ಕಟೀಲ್
- 14 Jan 2024 , 10:16 PM
- Belagavi
- 92
ಬೆಳಗಾವಿ: ಸಿದ್ದರಾಮಯ್ಯ ಅವರು ಯಾರ ಗುಲಾಮರು ಎಂದು ದೇಶಕ್ಕೆ ಗೊತ್ತಿದೆ. ಅವರು ಯಾರು ಕಾಲ ಹಿಡಿದು ಸಿಎಂ ಆಗಿದ್ದಾರೆ ಅನ್ನೋದು ಗೊತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಹರಿಹಾಯ್ದರು.

ಮಂಗಳವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿ ಸಂಸದರು ಕೇಂದ್ರ ಸರಕಾರ ಗುಲಾಮರು ಎಂಬ ಸಿದ್ದರಾಮಯ್ಯ ಹೇಳಿಕೆಯ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ರಾಮಣ್ಣ ಯಾರ ಕಾಲು ಹಿಡಿದು ಸಿಎಂ ಆಗಿದ್ದಾರೆ. ಅವರಿಗೆ 65 ವರ್ಷ ಅವರು ಹಿರಿಯರು ರಾಹುಲ್ ಗಾಂಧಿ ಕಿರಿಯರು ಅವರ ಕಾಲು ಹಿಡಿದು ಸಿಎಂ ಆಗಿದ್ದಾರೆ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು.

ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ವಿಚಾರ ತನಿಖೆ ಹಂತದಲ್ಲಿದೆ, ಸಿದ್ದರಾಮಯ್ಯ ಅವರು ಸಿಎಂ ಇದ್ದಾಗ ಸಿಡಿ ಗಳು ಯಾವ ರೀತಿ ತನಿಖೆ ಆಗಿದೆ ಎಂಬುದು ಗೊತ್ತಿದೆ. ಸಿದ್ದರಾಮಯ್ಯ ಅವರಿಗೆ ಸಿಬಿಐ, ಐಟಿ, ಎಸ್ ಐ ಟಿ, ಮೆಲೆ ನಂಬಿಕೆ ಇಲ್ಲ,ಅಷ್ಡಕ್ಕೂ ಅವರಿಗೆ ಅವರ ಮೆಲೆ ಅವರಿಗೆ ನಂಬಿಕೆನೆ ಇಲ್ಲ ಎಂದು ವ್ಯಂಗ್ಯವಾಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಉಮೇಶ ಕತ್ತಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










