ತಂದೆಯ ಪರ ಪ್ರಚಾರ ನಡೆಸಿದ ಪುತ್ರ,ಪುತ್ರಿ

ಬೆಳಗಾವಿ: ಲೋಕಸಭಾ ಉಪ ಚುನಾವಣೆ ಕಣ ರಂಗೇರಿದ್ದು, ಕಾಂಗ್ರೆಸ್ ನಿಂದ ಕಣದಲ್ಲಿರುವ ತಂದೆ ಪರ ಮಕ್ಕಳು ಮತ ಬೇಟೆ ಆರಂಭಿಸಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

promotions

ಕಾಂಗ್ರೆಸ್ ನಿಂದ ಸತೀಶ್ ಜಾರಕಿಹೊಳಿ ಹಾಗೂ ಬಿಜೆಪಿಯಿಂದ ಮಂಗಳಾ ಅಂಗಡಿ ಬೆಳಗಾವಿಯಲ್ಲಿ ಸ್ಪರ್ಧಿಸಿದ್ದಾರೆ. ಸತೀಶ್ ಜಾರಕಿಹೊಳಿ ಪರ , ಮಗ ರಾಹುಲ್ ಹಾಗೂ ಮಗಳು ಪ್ರಿಯಾಂಕಾ ಜಾರಕಿಹೊಳಿ ಪ್ರಚಾರ ನಡೆಸಿದ್ದರೇ.

promotions

ಮತ್ತೊಂದೆಡೆ ಮಂಗಲಾ ಅಂಗಡಿ ಪರ ಮಗಳು ಶ್ರದ್ಧಾ ಅಂಗಡಿ ಪ್ರಚಾರ ನಡೆಸಿದ್ದಾರೆ. ಪ್ರಿಯಾಂಕಾ ಜಾರಕಿಹೊಳಿ ಮಂಗಳವಾರ ಕಡಬಗಟ್ಟಿ, ಕನಸಗೇರಿ, ತವಗ, ಕೈತನಾಳ, ಕೈ ಹೊಸೂರ ಗ್ರಾಮಗಳಿಗೆ ತೆರಳಿ, ತಂದೆ ಪರ ಪ್ರಚಾರ ನಡೆಸಿದ್ದಾರೆ.

ತಂದೆಯವರು ಹಲವು ವರ್ಷಗಳಿಂದ ಜನ ಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಲೋಕಸಭೆ ಉಪಚುನಾವಣೆಯಲ್ಲಿ ತಂದೆಗೆ ಮತ ನೀಡಿ, ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಮತ ಕೇಳುತ್ತಿದ್ದಾರೆ. ಮತ್ತೊಂದೆಡೆ ರಾಹುಲ್ , ನಿನ್ನೆ ಗೋಕಾಕ ತಾಲ್ಲೂಕಿನ ಅಡಿಬಟ್ಟಿ ಗ್ರಾಮಕ್ಕೆ ತೆರಳಿ ಪ್ರಚಾರ ಕೈಗೊಂಡಿದ್ದರು.

ನಮ್ಮ ತಂದೆ ಸತೀಶ್ ಜಾರಕಿಹೊಳಿಯವರ ಜನಪರ ಕಾಳಜಿಗೆ ಮತ ನೀಡಿ ಎಂದು ಮತಯಾಚನೆ ಮಾಡ್ತಿದ್ದಾರೆ. ಮಂಗಳವಾರವೂ ಸಹ ಬೆಳಗಾವಿ ಲೋಕಸಭಾ ಕ್ಷೇತ್ರ ವಿವಿಧ ಗ್ರಾಮಗಳಿಗೆ ತೆರಳಿದ್ದಾರೆ.

ಗಮನಸೆಳೆದಮಕ್ಕಳಪ್ರಚಾರ : ಸತೀಶ್ ಪರ , ಮಗ ರಾಹುಲ್ , ಮಗಳು ಪ್ರಿಯಾಂಕಾ ಹಾಗೂ ಮಂಗಲಾ ಅಂಗಡಿ ಪರ ಶ್ರದ್ಧಾ ಪ್ರಚಾರ ನಡೆಸುತ್ತಿರುವುದು ಕ್ಷೇತ್ರದ ಜನರ ಗಮನ ಸೆಳೆದಿದೆ. ತಂದೆ , ತಾಯಿ ಗೆಲುವಿಗೆ ಮಕ್ಕಳು ಭರ್ಜರಿ ಪ್ರಚಾರ ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಗಮನ ಸೆಳೆಯುತ್ತಿದೆ.

ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರು ಸಹ ತಮ್ಮ ಅಭ್ಯರ್ಥಿಗಳ ಮಕ್ಕಳ ಜೊತೆಯಾಗಿ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ಜನರು ಸಹ ಮತ ನೀಡುವ ಭರವಸೆ ನೀಡುತ್ತಿದ್ದಾರೆ.

ರಂಗೇರಿದಉಪಚುನಾವಣೆಅಖಾಡ : ಸೋಮವಾರ ಕೆಪಿಸಿಸಿ ಕಾರ್ಯಾಧ್ಯಕ್ಷ, ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸರಳವಾಗಿ ನಾಮಪತ್ರ ಸಲ್ಲಿಸಿದರು. ರಾಜ್ಯ ಕಾಂಗ್ರೆಸ್ ನಾಯಕರು ಸಹ ಸಾಥ್ ನೀಡಿದರು. ಮಂಗಳವಾರ ಮಂಗಲಾ ಅಂಗಡಿ ಅವರು ಸಹ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯ ನಾಯಕರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.

ಕಾಂಗ್ರೆಸ್ ಬಿಜೆಪಿ ಅಧಿಕೃತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿರುವುದರಿಂದ ಬೆಳಗಾವಿ ಲೋಕಸಭಾ ಅಖಾಡ ರಂಗೇರ ತೊಡಗಿದೆ.

Read More Articles