ಏ.3 ರಂದು ವಿಟಿಯು ಘಟಿಕೋತ್ಸವ: ಚಿನ್ನಕ್ಕೆ ಮುತ್ತಿಡಲಿದ್ದಾರೆ ವಿದ್ಯಾರ್ಥಿಗಳು
- 15 Jan 2024 , 1:56 AM
- Belagavi
- 206
ಬೆಳಗಾವಿ:ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20ನೇ ವಾರ್ಷಿಕ ಘಟಿಕೋತ್ಸವವನ್ನು ಶನಿವಾರ (ಏ.03) ಮಧ್ಯಾಹ್ನ 12 ಗಂಟೆಗೆ ವಿಶ್ವವಿದ್ಯಾಲಯದ "ಜ್ಞಾನ ಸಂಗಮ" ಆವರಣದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕುಲಪತಿಗಳಾದ ಪ್ರೊ.ಕರಿಸಿದ್ದಪ್ಪ ಅವರು ತಿಳಿಸಿದರು.

ವಿಶ್ವವಿದ್ಯಾಲಯದ ಸೆನೆಟ್ ಸಭಾಂಗಣದಲ್ಲಿ ಮಂಗಳವಾರ (ಮಾ.30) ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 20ನೇ ವಾರ್ಷಿಕ ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ವಜುಭಾಯಿ ಆರ್.ವಾಲಾ ಅವರು ವಹಿಸಲಿದ್ದಾರೆ.

ಪದ್ಮವಿಭೂಷಣ ಪುರಸ್ಕತರು ಹಾಗೂ ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಮಾಜಿ ವೈಜ್ಞಾನಿಕ ಸಲಹೆಗಾರರಾದ ಡಾ.ವಿ.ಕೆ.ಆತ್ರೆ ಅವರು ಮುಖ್ಯ ಅತಿಥಿಗಳಾಗಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಕುಲಪತಿಗಳಾದ ಪ್ರೊ.ಕರಿಸಿದ್ದಪ್ಪ ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳಾದ ಪ್ರೊ.ಅಶುತೋಷ್ ಶರ್ಮ ಅವರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
63,100ಬಿಇಹಾಗೂ635ಪಿಎಚ್.ಡಿ ಪದವಿಪ್ರದಾನ : ವಿಶ್ವವಿದ್ಯಾಲಯದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ 63,100 ಬಿ.ಇ., 892 ಬಿ.ಆಕ್9, 4817 ಎಂಬಿಎ, 1248 ಎಂಸಿಎ, 1704 ಎಂ.ಟೆಕ್., 77 ಎಂ.ಆಕ್9 ಮತ್ತು 278 ಪಿ.ಜಿ. ಡಿಪ್ಲೊಮಾ ಪದವಿಗಳನ್ನು ಪ್ರದಾನ ಮಾಡಲಾಗುವುದು. ಅಲ್ಲದೇ, ಯಶಸ್ವಿಯಾಗಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 635 ಪಿಎಚ್.ಡಿ ಹಾಗೂ 5 ಎಂ.ಎಸ್ಸಿ.(ಇಂಜಿನಿಯರಿಂಗ್ ) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ.
ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಹಾಗೂ ಮ್ಯಾನೆಜ್ಮೆಂಟ್ ಕಾಲೇಜಿನ ಅಸ್ಮತ್ ಶರ್ಮಿನ್ ಅವರು 13, ಬೆಂಗಳೂರಿನ ಬಿ.ಎಮ್.ಎಸ್.ತಾಂತ್ರಿಕ ವಿದ್ಯಾಲಯದ ಅರುಣ.ಡಿ ಅವರು 7 ಮತ್ತು ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಗಗನಾ ರೆಡ್ಡಿ 7 ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಈ ಮೂವರು ಸೇರಿದಂತೆ, ಒಟ್ಟು 11 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಗುವುದು ಎಂದು ಕುಲಪತಿಗಳಾದ ಪ್ರೊ.ಕರಿಸಿದ್ದಪ್ಪ ಮಾಹಿತಿ ನೀಡಿದರು.
ಘಟಿಕೋತ್ಸವದಲ್ಲಿಕೋವಿಡ್ಮಾರ್ಗಸೂಚಿಗಳಪಾಲನೆ: ಕೋವಿಡ್-19 ವೈರಾಣುವಿನ ಹರಡುವಿಕೆಯ ಹಿನ್ನೆಲೆಯಲ್ಲಿ, ಸರ್ಕಾರ ಆದೇಶಿಸಿದ ಎಲ್ಲ ಮಾರ್ಗಸೂಚಿಗಳ ಪಾಲನೆಯಾಗುವಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪದವಿ ಪ್ರದಾನ ಕಾರ್ಯಕ್ರಮವು ಮಧ್ಯಾಹ್ನ 12:30 ಗಂಟೆಗೆ ಆರಂಭಗೊಳ್ಳುತ್ತದೆ.
ನಂತರ ಸಾಯಂಕಾಲ 4 ಗಂಟೆಗೆ ಸಂಶೋಧನಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮವಿರುವುದರಿಂದ ಸಭಾಂಗಣದಲ್ಲಿ 100 ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳಲ್ಲಿ ಘಟಿಕೋತ್ಸವದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಕುಲಪತಿಗಳಾದ ಪ್ರೊ.ಕರಿಸಿದ್ದಪ್ಪ ಅವರು ತಿಳಿಸಿದರು.
ಘಟಿಕೋತ್ಸವಕ್ಕೆಆಗಮಿಸುವವರಿಗೆಬಸ್ವ್ಯವಸ್ಥೆ : ಘಟಿಕೋತ್ಸವಕ್ಕೆ ಆಗಮಿಸುವ ವಿದ್ಯಾರ್ಥಿಗಳು, ಪಾಲಕರು ಹಾಗೂ ಆಹ್ವಾನಿತರಿಗೆ ಶನಿವಾರ (ಏ.03) ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆಯಿAದ 8:30 ಗಂಟೆಯವರೆಗೆ ಬಸ್ ವ್ಯವಸ್ಥೆ ಮಾಡಲಾಗುವುದು. ಪತ್ರಿಕಾ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಘಟಿಕೋತ್ಸವದ ದಿನದಂದು ಬೆಳಿಗ್ಗೆ 9:30 ಗಂಟೆಗೆ ಜಿಲ್ಲಾ ವಾರ್ತಾ ಭವನದಿಂದ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಕುಲಪತಿಗಳಾದ ಪ್ರೊ.ಕರಿಸಿದ್ದಪ್ಪ ಅವರು ತಿಳಿಸಿದರು.
ಕುಲಸಚಿವರಾದ ಪ್ರೊ.ಆನಂದ ದೇಶಪಾಂಡೆ ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಬಿ.ಈ.ರಂಗಸ್ವಾಮಿ ಉಪಸ್ಥಿತರಿದ್ದರು.










