ಪೌರ ಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ
- 15 Jan 2024 , 12:44 AM
- Belagavi
- 82
ಬೆಳಗಾವಿ : ಲೋಕಸಭಾ ಉಪ ಚುನಾವಣೆ -2021 ಕುರಿತು ಜಿಲ್ಲಾ ಸ್ವೀಪ್ ಸಮೀತಿ ವತಿಯಿಂದ ಮತದಾರರಿಗೆ ಮತದಾನದ ಜಾಗೃತಿಗಾಗಿ ಬುಧವಾರ ಮಹಾನಗರ ಪಾಲಿಕೆಯ ಸುಮಾರು 100 ಜನ ಪೌರ ಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.

ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಸ್ವೀಪ್ ಸಮಿತಿ ಅದ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್. ಹೆಚ್. ವಿ, ಹಾಗೂ ಮಹಾನಗರ ಪಾಲಿಕೆ ಆಯುಕ್ತ ಕೆ. ಹೆಚ್. ಜಗದೀಶ್ ಚಾಲನೆ ನೀಡಿದರು. ರಾಣಿ ಚನ್ನಮ್ಮಾ ವೃತ್ತದಿಂದ ಪ್ರಾರಂಭವಾದ ಜಾಥಾ, ಬೋಗಾರವೆಸ್, ಕಿರ್ಲೋಸ್ಕರ್ ರೋಡ್, ರಾಮದೇವ ಗಲ್ಲಿ, ಖಡೇ ಬಜಾರ ರಸ್ತೆ ಮುಖಾಂತರ ಸಂಚರಿಸಿ ಶನಿವಾರ ಕೂಟ ಮೂಲಕ ಸರದಾರ ಮೈದಾನದಲ್ಲಿ ಅಂತ್ಯಗೊಂಡಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿಗಳಾದ ಪಿ. ಬಿ. ದುಡಗುಂಟಿ ಬೆಳಗಾವಿ ನಗರ ಬಿ.ಇ.ಓ ರವಿ ಭಜಂತ್ರಿ, ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅನ್ವೇಕರ, ರೋಹನ ಕೋಕಣೆ ಮತ್ತು ಜಿಲ್ಲಾ ಸ್ವೀಪ್ ಸಮಿತಿ ತಂಡದ ಪಿ. ಪಿ. ದೇಶಪಾಂಡೆ, ಎ.ಪಿ.ಬಸನಾಳ, ಐ.ಡಿ.ಹಿರೇಮಠ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.










