ಕೋರೊನಾ ಎಫೆಕ್ಟ್: ಹುಕ್ಕೇರಿ ಪ್ರಸಿದ್ಧ ಲಕ್ಷ್ಮೀ ದೇವಿ ಜಾತ್ರೆ ರದ್ದು

ಹುಕ್ಕೇರಿ: ಮಹಾಮಾರಿ ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿರುವ ಮೂರು ವರ್ಷಗಳಿಗೊಮ್ಮೆ ನಡೆಯುವ ಪ್ರಸಿದ್ಧ ಜಾತ್ರೆ ರದ್ದು ಪಡಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ನಿರ್ಧರಿಸಿದೆ.

promotions

ಕೋವಿಡ್‌ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಶಕ್ತಿ ದೇವತೆಯ ಜಾತ್ರೆಯನ್ನು ರಾಜ್ಯ ಸರ್ಕಾರದ ಆದೇಶದನ್ವಯ ಹುಕ್ಕೇರಿ ದೇವಿ ಜಾತ್ರೆ ರದ್ದು ಪಡಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.  ರಾಜ್ಯದಲ್ಲಿ ಕೊರೋನಾ ದೂರವಾಯಿತು, ಲಾಕ್ ಡೌನ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿಯುತ್ತಿದೆ.

promotions

ಈಗ ಏನಿದ್ದರೂ ಮೊದಲಿನಂತೆ, ಜಾತ್ರೆ, ಸಭೆ, ಸಮಾರಂಭಗಳನ್ನು ಮಾಡಬಹುದು ಎಲ್ಲಾ ಕಷ್ಟಗಳು ದೂರವಾದವು ಎಂದುಕೊಂಡು ಖುಷಿಯಾಗಿದ್ದವರಿಗೆ ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ ಎಂಬಂತೆ ಈಗ ಮತ್ತೆ ಕೊರೋನಾ ಅಬ್ಬರಿಸಲು ಆರಂಭಿಸಿದೆ. ಈಗಿನ ಕೊರೋನಾ ಎರಡನೇ ಅಲೆ ಶುರುವಾಗಿದೆ.

ಕೊರೋನಾ ಹರಡುವ ತೀವ್ರತೆ ಅಧಿಕವಾಗಿದೆ. ಅದಕ್ಕಾಗಿ ಈಗ ಮತ್ತೆ ಕಠಿಣ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದರ ನಡುವೆಯು ಕೂಡ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಶ್ರೀ ಲಕ್ಷ್ಮೀ ದೇವಿ ಜಾತ್ರೆಗೆ ಸಕಲ ಸಿದ್ದತೆಗಳನ್ನು ಜನ ಮಾಡುತ್ತಿದ್ದಾರೆ ಮತ್ತೆ ಕೊರೊನಾ ಆರ್ಭಟದ ನಡುವೆಯು ಹುಕ್ಕೇರಿ ಜಾತ್ರೆ ನಡೆಯುತ್ತಾ ಎಂಬ ಕೂತಹಲಕಾರಿಯಾಗಿ ಜನ ಕಾದೂ ನೋಡುತಿದ್ದಾರೆ.

Read More Articles