ಸಚಿವ ಸಂಪುಟದವರು ಸಿಎಂ ಪ್ರಶ್ನೆ ಮಾಡುವುದು ಸರಿಯಲ್ಲ: ಡಿಸಿಎಂ ಗೋವಿಂದ್

ಬೆಳಗಾವಿ: ನಮ್ಮ ಸಚಿವ ಸಂಪುಟದವರು, ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಯಾರೂ ಕೂಡ ಸಿಎಂ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಪರೋಕ್ಷವಾಗಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

promotions

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಒಮ್ಮತದಿಂದ ಸಚಿವ ಸಂಪುಟ ಕೆಲಸ ಮಾಡುತ್ತಿರುತ್ತದೆ. ಪ್ರತಿಯೊಂದು ಇಲಾಖೆಗೂ ಒಟ್ಟು 33 ಇಲಾಖೆಗೂ ಸಿಎಂ ಬಿ.ಎಸ್.ಯಡಿಯೂರಪ್ಪನರವರು ಬಜೆಟ್‌ನಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ. ಅವರು ಕೊಟ್ಟಿರುವ ಬಜೆಟ್‌ನಲ್ಲಿ 224 ವಿಧಾನಸಭಾ ಕ್ಷೇತ್ರಕ್ಕೆ ಶಾಸಕರು ಕೇಳುವಷ್ಟು ಅನುದಾನ ಬಿಡುಗಡೆಯಾಗಲು ಸಾಧ್ಯವಾಗುವುದಿಲ್ಲ ಎಂದರು.

promotions

ಅನೇಕ ಬಾರಿ ನಮ್ಮ ಬಳಿ ಬರುವ ಸಂಸದರು, ಶಾಸಕರಿಗೆ ನಾವು ಹೇಳುತ್ತೇವೆ. ನಮಗೆ ಕೊಟ್ಟಷ್ಟು ಅನುದಾನ ಸಾಕಾಗಿಲ್ಲ. ಇಷ್ಟೆ ಅನುದಾನ ಇರುವುದರಿಂದ ನಿಮಗೆ ಇಷ್ಟೆ ಕೊಡಲು ಸಾಧ್ಯವಾಗಿದೆ. ನಿಮಗೆ ಹೆಚ್ಚಿನ ಅನುದಾನ ಬೇಕಿದ್ದರೆ ಸಿಎಂ ಬಳಿ ಹೋಗಿ ತೆಗೆದುಕೊಳ್ಳಬಹುದು ಎಂದು ಹತ್ತಾರು ಬಾರಿ ಹೇಳಿದ್ದೇವೆ.

ಅದರಂತೆ ಸಿಎಂ ಯಡಿಯೂರಪ್ಪನವರು ಶಾಸಕರ ಬೇಕು ಬೇಡಿಕೆಯನ್ನು ಪರಿಶೀಲನೆ ಮಾಡಿ ಅನುದಾನ ನೀಡುವುದು ಕಳೆದ 70 ವರ್ಷದಿಂದ ರೂಢಿಯಲ್ಲಿರುವ ಪ್ರಕ್ರಿಯೆ ಇದು ಇವತ್ತು ನಿನ್ನೆಯದಲ್ಲ ಎಂದು ಹೇಳಿದರು.

Read More Articles