ಅಭಿವೃದ್ದಿ, ಜನಸೇವೆ ಮಾಡಲು ಸತೀಶ ಅವರಿಗೆ ಮತ ನೀಡಿ: ಪ್ರಿಯಾಂಕಾ

ಬೆಳಗಾವಿ: ಲೋಕಸಭಾ ಅಭಿವೃದ್ಧಿ ಹಾಗೂ ಜನ ಸೇವೆ ಮಾಡಲು `ಶಾಸಕ ಸತೀಶ ಜಾರಕಿಹೊಳಿ' ಅವರಿಗೆ ಇದು ಒಳ್ಳೆಯ ಅವಕಾಶ , ಕ್ಷೇತ್ರದ ಜನತೆ ತಂದೆಯವರನ್ನು ಬೆಂಬಲಿಸುವ ಮೂಲಕ ಆಶೀರ್ವದಿಸಬೇಕು. ಈ ನಾಡಿನಲ್ಲಿ ಜನರು ಬದಲಾವಣೆ ಬಯಸಿದ್ದಾರೆ ಎಂದು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

promotions

ಗೋಕಾಕ ತಾಲೂಕಿನ ಹೂಲಿಕಟ್ಟಿ, ಮಕ್ಕಳಗೇರಿ, ಹಿರೇಹಟ್ಟಿ, ಜಮನಾಳ, ಪುಡಕಲಕಟ್ಟಿ, ಶಿಲ್ತಿಭಾವಿ ಗ್ರಾಮಗಳಿಗೆ ಭೇಟಿ ನೀಡಿ ತಂದೆ ಪರ ಮತಯಾಚಿಸಿದರು. ಬಿಜೆಪಿ ಆಡಳಿತದಲ್ಲಿ ಬೆಲೆ ಏರಿಕೆ ಕಂಡಿದೆ, ಕಡುಬಡವ ಜನತೆಗೆ ಜೀವನ ಸಾಗಿಸಲು ಕಷ್ಟಕರವಾಗಿದೆ.

promotions

ಇವುಗಳ ವಿರುದ್ಧ ಹೋರಾಟ ಮಾಡಲು ತಂದೆ ಅವಕಾಶ ಮಾಡಿಕೊಡಿ, ನಿಮ್ಮ ಸೇವೆ ಜತೆ ಕ್ಷೇತ್ರದಲ್ಲಿರುವ ಸಮಸ್ಯೆಗಳಿಗೆ ಮುಕ್ತಿ ದೊರಕಿಸುತ್ತಾರೆ ಎಂದರು. ಈ ವೇಳೆ ಗ್ರಾಮದಲ್ಲಿರುವ ದೇವಸ್ಥಾನ, ದರ್ಗಾ, ಚರ್ಚಗಳಿಗೆ ಪ್ರಿಯಾಂಕಾ ಜಾರಕಿಹೊಳಿ ಭೇಟಿ ನೀಡಿ ದರ್ಶನ ಪಡೆದರು.

Read More Articles