ಗ್ರಾಮ ಮಾದರಿಯಾಗಬೇಕಾದರೆ ಕಾಂಗ್ರೆಸ್ ಗೆ ಮತ ನೀಡಿ: ರಾಹುಲ್
- 14 Jan 2024 , 11:06 PM
- Belagavi
- 97
ಬೆಳಗಾವಿ: ಗ್ರಾಮೀಣ ಮಕ್ಕಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಿಂಚಬೇಂಕೆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯವಿದೆ. ಆದರೆ, ಇಲ್ಲಿವರೆಗೂ ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿ ಪ್ರೌಢಶಾಲೆ ಕಲ್ಪಿಸಲು ಆಡಳಿತ ಸರಕಾರ ಚಿಂತನೆ ನಡೆಸಿಲ್ಲ, ಮಕ್ಕಳು ಕಲಿತರೆ ಗ್ರಾಮವೇ ಮಾದರಿ, ಗ್ರಾಮವೇ ಮಾದರಿಯಾದರೇ ಕ್ಷೇತ್ರ ಮಾದರಿಯಾಗುತ್ತದೆ.

ಹೀಗಾಗಿ ತಳಮಟ್ಟದಿಂದ ಕ್ಷೇತ್ರಗಳ ಅಭಿವೃದ್ದಿಗೆ `ಶಾಸಕ ಸತೀಶ ಜಾರಕಿಹೊಳಿ' ಯವರಿಗೆ ಮತದಾನ ಮಾಡಿ ಎಂದು ರಾಹುಲ್ ಜಾರಕಿಹೊಳಿ ಮನವಿ ಮಾಡಿಕೊಂಡರು. ಗೋಕಾಕ ತಾಲೂಕಿನ ಸತ್ತಿಗೇರಿ ತೋಟ, (ದುರದುಂಡಿ). ಬಡಿಗವಾಡ , ಗಣೇಶವಾಡಿ, ದಂಡಾಪುರ ಗ್ರಾಮಗಳಲ್ಲಿ ರಾಹುಲ್ ಜಾರಕಿಹೊಳಿಯವರು ತಂದೆ ಪರ ಶುಕ್ರವಾರ ಭರ್ಜರಿ ಪ್ರಚಾರ ನಡೆಸಿ ಅವರು ಮಾತನಾಡಿ,

ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದೆಂದು ನಸತೀಶ ಜಾರಕಿಹೊಳಿಯವರು 1995 ರಲ್ಲಿ ಪ್ರತಿ ಗ್ರಾಮಗಳಲ್ಲಿ ನಾಯಕ ಪೇಡರೇಶನ್ (ಎನ್ಎಸ್ಎಪ್) ಶಾಲೆಗಳನ್ನು ಪ್ರಾಂರಭಿಸಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಈ ಶಾಲೆಯಲ್ಲಿ ಕಲಿತ ನನ್ನ ಸಹೋದರ, ಸಹೋದಿಯರು ದೇಶ, ವಿದೇಶದಲ್ಲಿ ಕಾರ್ಯನಿರ್ವಸುತ್ತಿದ್ದಾರೆ. ಮತ್ತೇ ಈ ಕ್ಷೇತ್ರದ ಜನತೆ ಸೇವೆಗಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಆದ ಸತೀಶ ಜಾರಕಿಹೊಳಿ ಯವರಿಗಾಗಿ ಮತಪ್ರಭುಗಳು ಕಾಂಗ್ರೆಸ್ ಜತೆ ಕೈ ಜೋಡಿಸಿ ತಂದೆಯವರನ್ನು ಗೆಲ್ಲಿಸಬೇಕೆಂದು ಪ್ರಚಾರ ಮಾಡಿದರು.










