ಮತದಾನ ಜಾಗೃತಿ ಕುರಿತು ಆಟೋ ರ‍್ಯಾಲಿ

ಬೆಳಗಾವಿ:ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆ-2021 ಕುರಿತು ಸ್ವೀಪ್ ಕಾರ್ಯಕ್ರಮದಡಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಿಗೆ ಮತದಾನದ ಜಾಗೃತಿ ಕುರಿತ ಆರ್.ಟಿ.ಓ ಹಾಗೂ ಆಟೋ ಚಾಲಕರ ಸಹಯೋಗದೊಂದಿಗೆ ಸುಮಾರು 50 ಆಟೋಗಳಿಂದ ಮತದಾನ ಜಾಗೃತಿ ಕುರಿತು ಆಟೋ ರ‍್ಯಾಲಿ ಹಮ್ಮಿಕೊಳ್ಳಲಾಯಿತು.

promotions

ಸದರಿ ರ‍್ಯಾಲಿಗೆ ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿಗಳಾದ ಪಿ.ಬಿ.ದುಡಗುಂಟಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಯಾದ ಶಿವಾನಂದ ಮಗದುಮ್ಮ ಅವರು ಚಾಲನೆ ನೀಡಿದರು.ರ‍್ಯಾಲಿಯು ಕಿಲ್ಲಾ ಕೋಟೆಯಿಂದ ಪ್ರಾರಂಭವಾಗಿ ಬಸ್ ಸ್ಟಾಡ್ ಮುಖಾಂತರ ಪೊರ್ಟ ರಸ್ತೆ, ಕಪಲೇಶ್ವರ ಮಾರ್ಗವಾಗಿ ಸಂಚರಿಸಿ ಗೋವಾವೇಸ್ ಸರ್ಕಲ್‌ನಲ್ಲಿ ಅಂತ್ಯಗೊoಡಿತು.

promotions

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ತಂಡದ ಪಿ.ಪಿ ದೇಶಪಾಂಡೆ, ಐ.ಡಿ.ಹಿರೇಮಠ, ಎ.ಪಿ.ಬಸನಾಳ, ಕಿರಣ ಗಣಾಚಾರಿ ಇವರು ಉಪಸ್ಥಿತರಿದ್ದರು.

Read More Articles