ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಫೈಟ್ ನಡೆತಿದೆ; ಸಚಿವ ಶೆಟ್ಟರ್

ಬೆಳಗಾವಿ: ನಗರದ ಧರ್ಮನಾಥ್ ಭವನದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವೆ ಫೈಟ್ ನಡೆತಿದೆ. ಮತ್ತೊಮ್ಮೆ ಮುಖ್ಯಮಂತ್ರಿ ಆಗ್ತೇನೆ ಅಂಥ ಸಿದ್ದರಾಮಯ್ಯ ಅಂತಿದಾರೆ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಆಗಿದ್ದೆ, ಮುಂದೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ರಾಜ್ಯದ ಭವಿಷ್ಯ ಹೇಳುವ ಎಲ್ಲಕಡೆ ಹೋಗಿ ಬಂದಿದ್ದಾರೆ ಅವರಿಗೆ ಭವಿಷ್ಯ ಹೇಳೋರೆ ಹೇಳಿದಾರೆ, ನೀವೇ ಮಂತ್ರಿ ಆಗುತ್ತೀರಿ ಎಂದು ಹೇಳಿದ ಶೆಟ್ಟರ್ ಕಾಂಗ್ರೆಸ್ ಪಕ್ಷದ ಸ್ಟಾಂಡ್ ಯಾರು ಮೊದಲು ತಿಳಿಸಿ ಕಾಂಗ್ರೆಸ್ ಒಡೆದ ಮನೆಯಾಗಿದೆ. ಕಾಂಗ್ರೆಸ್ ನಿಂದ ಯಾವದೇ ಅಭಿವೃದ್ಧಿ ಕೆಲಸವಾಗಿಲ್ಲಅಭಿವೃದ್ಧಿ ಕೆಲಸ ಏನಾದ್ರು ಆಗಿದ್ರೆ ಅದು ಬಿಜೆಪಿ ಯಿಂದ ಮಾತ್ರ ಎಂದು ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

promotions

promotions

Read More Articles