ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್, ಹುಷಾರಾಗಿ ಚುನಾವಣಾ ಪ್ರಚಾರಕ್ಕೆ ಬರ್ತಾರೆ ಎಂದ ಭೈರತಿ
- 15 Jan 2024 , 2:18 AM
- Belagavi
- 88
ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿರವರಿಗೆ ಕೊರೊನಾ ದೃಢಪಟ್ಟಿದೆ ಎಂದು ಬೆಳಗಾವಿಯಲ್ಲಿ ಸಚಿವ ಭೈರತಿ ಬಸವರಾಜ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಎಲ್ಲಿಯೂ ಹೋಗಿಲ್ಲ ಬೆಂಗಳೂರಿನಲ್ಲಿಯೇ ಇದ್ದಾರೆ. ಇನ್ನೆರಡು ದಿನಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ ಬರ್ತಾರೆ ಕೇವಲ ಚುನಾವಣಾ ಪ್ರಚಾರ ಕುರಿತು ರಮೇಶ್, ಬಾಲಚಂದ್ರ ಜೊತೆ ನಿನ್ನೆ ಫೋನ್‌ನಲ್ಲಿ ಮಾತನಾಡಿದ್ದೇನೆ.

ರಮೇಶ ಹುಷಾರಾಗಿ ಚುನಾವಣಾ ಪ್ರಚಾರಕ್ಕೆ ಬರೋದಾಗಿ ಹೇಳಿದ್ದಾರೆ. ಇಂದು ನಾನು ಸೇರಿ ನಮ್ಮೆಲ್ಲ ನಾಯಕರು ಗೋಕಾಕ, ಅರಭಾವಿಗೆ ಹೋಗ್ತಿದೀವಿ. ಮುಖ್ಯಮಂತ್ರಿಗಳ ಸೂಚನೆಯಂತೆ ಬೆಳಗಾವಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ. ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಜಯಸಾಧಿಸುವಲ್ಲಿ ಸಂದೇಹ ಇಲ್ಲ ದಿ.ಸುರೇಶ್ ಅಂಗಡಿ ಜನಪರ ಕಾರ್ಯಕ್ರಮ ಮುಂದಿಟ್ಟು ಮತಯಾಚನೆ ಮಾಡುತ್ತೇವೆ ನರೇಂದ್ರ ಮೋದಿ ಜನಪರ ಕಾರ್ಯಗಳನ್ನು ಮುಂದಿಟ್ಟು ಮತ ಕೇಳ್ತೇವೆ ಎಂದು ಹೇಳಿದ ಅವರು ಬೆಳಗಾವಿ ನಗರ ಅಭಿವೃದ್ಧಿಗೆ ಇತ್ತೀಚೆಗೆ 150 ಕೋಟಿ ರೂ. ಕೊಟ್ಟಿದ್ದೇವೆ.

ಬೆಳಗಾವಿ ಜನತೆ ಅತಿಹೆಚ್ಚಿನ ಮತ ನೀಡಿ ಮಂಗಳಾ ಅಂಗಡಿರನ್ನು ಗೆಲ್ಲಿಸುತ್ತಾರೆ. ನಿನ್ನೆ ಕುರುಬ ಸಮುದಾಯದ ಮುಖಂಡರ ಜೊತೆ ಚರ್ಚಿಸಿದ್ದೇನೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿಯಲ್ಲಿ ಜಯಭೇರಿ ಬಾರಿಸುತ್ತೇವೆ.










