ಸತೀಶ ಜಾರಕಿಹೊಳಿಯವರಿಗೆ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಿ: ರಾಹುಲ್ ಜಾರಕಿಹೊಳಿ

ಅರಬಾವಿ:  ಮತಕ್ಷೇತ್ರದ ಉದಗಟ್ಟಿ, ಹಡಗಿನಾಳ ಹಾಗೂ ತಳಕಟ್ನಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಪರ ಯುವ ಮುಖಂಡರಾದ ರಾಹುಲ್ ಜಾರಕಿಹೊಳಿ ಅವರು ಸೋಮವಾರ ಉಪಚುನಾವಣಾ ಪ್ರಚಾರ ನಡೆಸಿ, ಮತಯಾಚಿಸಿದರು. ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, "ಸಮಗ್ರ ಬೆಳಗಾವಿ ಅಭಿವೃದ್ಧಿಗಾಗಿ ಸತೀಶ ಜಾರಕಿಹೊಳಿ ಅವರಿಗೆ ಜನರು ಮತ ನೀಡಬೇಕು.

promotions

ಸಂಸತ್ ಸದಸ್ಯರಾಗಿ ಈ ಭಾಗದಲ್ಲೂ ಸೇವೆ ಸಲ್ಲಿಸಲು ಅವರಿಗೆ ಅವಕಾಶ ಮಾಡಿಕೊಡಬೇಕು. ಇದೇ ಎ.17 ರಂದು ನಡೆಯುವ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಎಲ್ಲರೂ ಕಾಂಗ್ರೆಸ್ ಗೆ ಮತ ನೀಡುವ ಮೂಲಕ, ತಂದೆ ಸತೀಶ ಅವರನ್ನು ಗೆಲ್ಲಿಸಬೇಕು" ಎಂದು ಮನವಿ ಮಾಡಿದರು.

promotions
logintomyvoice

ಇದೇ ವೇಳೆ ರಾಹುಲ್ ಅವರು ಮುರಸಿದ್ಧೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಗ್ರಾಮಸ್ಥರು ಹಾಗೂ ದೇವಸ್ಥಾನದ ವತಿಯಿಂದ ರಾಹುಲ್ ಅವರನ್ನು ಸತ್ಕರಿಸಲಾಯಿತು. ಮತಕ್ಷೇತ್ರದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು.

Read More Articles