ಉಪಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ: ಸತೀಶ ಜಾರಕಿಹೊಳಿ

ಬೆಳಗಾವಿ:ಲೋಕಸಭಾ ಉಪಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ" ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.

promotions

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಷ್ಟು ಅಂತರಿಂದ ಗೆಲ್ಲುತ್ತೇವೆ ಎಂದು ಹೇಳಲಾಗುವುದಿಲ್ಲ. ಆದರೆ, ನಮ್ಮ ಜಯ ನಿಶ್ಚಿತ" ಎಂದು ಭರವಸೆ ವ್ಯಕ್ತಪಡಿಸಿದರು.

promotions

"25 ವರ್ಷದಿಂದ ಜನರ ಸೇವೆ ಮಾಡುತ್ತಿದ್ದೇವೆ. ಜಿಲ್ಲೆಯ ಪ್ರತಿ ಹಳ್ಳಿಯಲ್ಲೂ ನಾವು ಕೆಲಸ ಮಾಡಿದ್ದೇವೆ. ಅನೇಕ ಕಾರ್ಯಕರ್ತರು ನಮ್ಮೊಂದಿಗಿದ್ದಾರೆ. ಇದರ ಲಾಭ ಚುನಾವಣೆಯಲ್ಲಿ ನಮಗೆ ಸಿಗಲಿದೆ" ಎಂದರು.

ನನಗೂ ಬಿಜೆಪಿಯವರು ಭೇಟಿಯಾಗುತ್ತಾರೆ:

ಸಹೋದರ ಲಖನ್ ಜಾರಕಿಹೊಳಿ ಮನೆಗೆ ಬಿಜೆಪಿ ಮುಖಂಡರು ಭೇಟಿ ನೀಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನನಗೂ ಪ್ರತಿದಿನ ಬಿಜೆಪಿಯವರು ಭೇಟಿ ಆಗುತ್ತಾರೆ. ಅದರಲ್ಲೇನು ವಿಶೇಷವಿಲ್ಲ. ಯಾರಿಗೆ ಬೆಂಬಲ ನೀಡುತ್ತಾರೆ ಎಂಬುದು ಅವರ ವೈಯಕ್ತಿಕ ವಿಚಾರ" ಎಂದು ಹೇಳಿದರು.

"ಹೋಗುವವರು ಹೋಗಲಿ, ಒಬ್ಬರು ಹೋದರೆ, ಮತ್ತೊಬ್ಬರು ಬಂದೇ ಬರುತ್ತಾರೆ. ನಮ್ಮ ಪಕ್ಷದ ಮತಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ" ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಜಗದೀಶ ಶೆಟ್ಟರ್ ಅವರ ಚಿಲ್ಲರೇ ರಾಜಕಾರಣ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಸತೀಶ ನಿರಾಕರಿಸಿದರು.

Read More Articles