ಸಾರಿಗೆ ನೌಕರರು ಹಟ ಬಿಟ್ಟು ಸೇವೆಗೆ ಮರುಳಿ: ಸಿಎಂ
- 15 Jan 2024 , 1:18 AM
- Belagavi
- 106
ಬೆಳಗಾವಿ: ಸಾರಿಗೆ ನೌಕರರ 9 ಬೇಡಿಕೆಯ ಪೈಕಿ ಸರಕಾರ 8 ಈಡೇರಿಸಿದ್ದೇವೆ. ಹಟ ಮಾಡಿ ಸಾರಿಗೆ ನೌಕರರು ಮುಷ್ಕರ ಮಾಡುವುದು ಸರಿಯಲ್ಲ. ಮುಷ್ಕರ ಕೈ ಬಿಟ್ಟು ಸೇವೆಗೆ ಮರಳಬೇಕು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಯಾಣಿಕರಿಗೆ ತೊಂದರೆಯಾಗದಂತೆ ಈಗಾಗಲೇ ಜಿಲ್ಲಾಕೇಂದ್ರದಿಂದ ಖಾಸಗಿ ವ್ಯವಸ್ಥೆ, ಬೇರೆ ಬೇರೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ವಾಹನದವರು ಪ್ರಯಾಣಿಕರ ಸುಲಿಗೆ ಮಾಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಖಾಸಗಿ ವಾಹನದವರಿಗೂ ಮನವಿ ಮಾಡುತ್ತೇವೆ. ಯಾರೂ ಪ್ರಯಾಣಿಕರ ಸುಲಿಗೆ ಮಾಡಬಾರದು. ಸಾರಿಗೆ ನೌಕರರೊಂದಿಗೆ ಸರಕಾರ ಮಾತುಕತೆಗೆ ಸಿದ್ದವಿದ್ದೇವೆ. ಯಾವುದೇ ಕಾರಣಕ್ಕೂ ಮುಷ್ಕರ ನಡೆಸುವುದನ್ನು ಕೈ ಬಿಟ್ಟು ಸಾರಿಗೆ ಸೇವೆ ನೀಡಬೇಕೆಂದು ಸಿಎಂ ವಿನಂತಿಸಿಕೊಂಡರು.
ಸಾರಿಗೆ ನೌಕರರು ಸ್ವಾರ್ಥಕ್ಕಾಗಿ ಮುಷ್ಕರ್ ನಡೆಸುತ್ತಿದ್ದಾರೆ ಎಸ್ಮಾ ಜಾರಿ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು. ನಿನ್ನೆಯಿಂದ ಪಕ್ಷದ ಮುಖಂಡರು, ಹಿರಿಯರ ಮುಖಂಡರನ್ನು ಭೇಟಿಯಾಗಿದ್ದೇನೆ.
ಸುರೇಶ ಅಂಗಡಿ ಅವರ ಹಿಂದಿನ ಅಭಿವೃದ್ಧಿ ಕಾರ್ಯಗಳು ನಮ್ಮ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರ ಕೈ ಹಿಡಿಯಲಿದೆ ಎಂದರು. ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.










