ಬೆಳಗಾವಿ: ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಪಕ್ಷಾತಿತವಾಗಿ ಮೂರು ಪಕ್ಷಗಳು ಒಕ್ಕೊರಲಿನಿಂದ ಕನ್ನಡ ಪರ ಸಂಘನೆಯ ಹೋರಾಟಗಾರರನ್ನು ಆಯ್ಕೆ ಮಾಡಬೇಕೆಂದು ಬೆಳಗಾವಿಯಲ್ಲಿ ವಿವಿಧ ಕನ್ನಡ ಪರ ಸಂಘನೆಗಳು ಒತ್ತಾಯಿಸುತ್ತಿವೆ. ಈ ಬಗ್ಗೆ ಲೋಕಲ್ ವಿವ್ಯೂ ಜೊತೆ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಈ ಗಡಿಭಾಗದಲ್ಲಿ ಕನ್ನಡ ಗಡಿ, ನಾಡು, ನುಡಿ ವಿಚಾರವಾದಿಗಳಿಗೆ ಕಳೆದ 50 ವರ್ಷಗಳಿಂದ ಸೀಟು ಕೊಟ್ಟಿಲ್ಲ. ಈ ಸಲವಾದರೂ ಕೊಡಿ ಎಂದು ಒತ್ತಾಯ ಮಾಡುತ್ತಿದ್ದೇವೆ ಅದರಲ್ಲಿ ತಪ್ಪಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಶೋಕ ಚಂದರಗಿ ಅವರನ್ನು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ವಿವಿಧ ಕನ್ನಡ ಪರ ಸಂಘಟನೆಗಳ ಸರ್ಕಾರವನ್ನು ಆಗ್ರಹಿಸುತ್ತಿವೆ ಎಂದು ಹೇಳಿ ಒಂದು ವೇಳೆ ವಿಧಾನ ಪರಿಷತಗೆ ಆಯ್ಕೆ ಆದರೆ ಬೆಳಗಾವಿ ಬಗ್ಗೆ ದ್ವನಿ ಎತ್ತುತ್ತೇನೆ. ಗಡಿಭಾಗದಲ್ಲಿ ಬಹಳಷ್ಟು ಸಮಸ್ಯೆಗಳಿವೆ, ಸುಮಾರು 2012 ರಿಂದ ಸುವರ್ಣಸೌಧಕ್ಕೆ ಕಚೇರಿಯ ಸ್ಥಳಾಂತರ ಬಗ್ಗೆ ಅಂದಿನ ಸಿಎಂ ಕುಮಾರಸ್ವಾಮಿಯವರು ಆದೇಶ ಮಾಡಿದರು, ಹಾಲಿ ಸಿಎಂ ಯಡಿಯೂರಪ್ಪನವರು ಆದೇಶ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಇದೊಂದೇ ವಿಚಾರವಲ್ಲ ಕರ್ನಾಟಕ - ಮಹಾರಾಷ್ಟ್ರದ ಗಡಿ ಭಾಗದಲ್ಲಿ ನೂರಾರು ಹಳ್ಳಿಗಳು ಅಭಿವೃದ್ಧಿಯಾಗದೆ ಹಾಗೆ ಉಳಿದಿವೆ. ಅಲ್ಲಿ ಕೇವಲ ಭಾಷಾ ಅಭಿಮಾನ ಬೆಳೆಸುವುದರ ಜೊತೆಗೆ ಸರಿಯಾಗಿ ನೀರು, ರಸ್ತೆ, ವಿದ್ಯುತ್ ವ್ಯವಸ್ಥೆ ಬೇಕು. ಗಡಿ ಭಾಗದ ಹಳ್ಳಿಗಳಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಅಭಿವೃದ್ಧಿಗೆ ಒತ್ತು ನೀಡಬೇಕು. ಗಡಿಭಾಗದ ಹಳ್ಳಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷಕ್ಕೆ ಒಳಗಾಗಬಾರದು ಆ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುವೆ. ಗಡಿ ಭಾಗವೆಂದರೆ ಕೇವಲ ಬೆಳಗಾವಿ, ಮಹಾರಾಷ್ಟ್ರವಲ್ಲ , ಕೇರಳ, ಕಾಸರಗೂಡು, ಚಾಮರಾಜನಗರ, ಕೋಲಾರ ಜಿಲ್ಲೆ ಕೂಡ ಇದೆ ಆದರೆ ಇವುಗಳ ಬಗ್ಗೆ ಯಾರೂ ದ್ವನಿ ಎತ್ತಿಲ್ಲ. ಇವೆಲ್ಲ ಗಡಿ ವಿಚಾರದ ಬಗ್ಗೆ ಕಾಳಜಿ ಉಳ್ಳವರು ನಾಲ್ಕು ಮಂದಿಯಾದರೂ ವಿಧಾನ ಪರಿಷತ್ ನಲ್ಲಿ ಬೇಕು ಎನ್ನುವನು ನಾನು. ಇನ್ನು ಗಡಿ ವಿಷಯಕ್ಕೆ ಬಂದ್ರೆ ಅಶೋಕ ಚಂದರಗಿ ಅವರು ಮೊದಲಿನಿಂದಲೂ ಧ್ವನಿ ಎತ್ತುತ್ತ ಬಂದಿದ್ದಾನೆ ಸುಮಾರು ಮೂವತ್ತು ವರ್ಷದಿಂದ ನಾನು ಹೋರಾಟ ಮಾಡುತ್ತಾ ಇದ್ದೇನೆ ಈ ಮೊದಲು ನಾನು ಕೂಡ ರಾಮಕೃಷ್ಣ ಹೆಗಡೆಯವರ ಸೆಕ್ರೆಟರಿಯಾಗಿ ರಾಜ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಬಂಗಾರಪ್ಪನವರ ಜೊತೆ ಉತ್ತಮ ಕೆಲಸ ಮಾಡಿದ್ದೇನೆ. ಆದರೆ ಆ ತತ್ವ ನಿಲುವು ಸಿದ್ಧಾಂತದ ಬಗ್ಗೆ ಈಗಿನವರಿಗೆ ಗೊತ್ತಿಲ್ಲ ಅದು ದುರ್ದೈವ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ ಅಶೋಕ ಚಂದರಗಿ ಅವರು ಇಂದಿನ ರಾಜಕಾರಣ ಕೇವಲ ಹಣದ ಮೇಲೆ ನಿಂತಿದೆ. ಅದರಲ್ಲಿ ದುಡ್ಡಿದ್ದವನೇ ದೊಡ್ಡಪ್ಪ ಎನ್ನುವ ಹಾಗಾಗಿದೆ. ಅದಕ್ಕೆ ನಾವು, ಎಲ್ಲ ಸಂಘಟನೆಗಳು ಸೇರಿ ಮಾಡುವ ಒಂದು ಸಣ್ಣ ಪ್ರಯತ್ನ ಎಂದು ತಮ್ಮ ಮನದಾಳದ ಮಾತನ್ನು ಲೋಕಲ್ ವಿವ್ಯೂ ಪ್ರತಿನಿಧಿ ಜೊತೆ ಬಿಚ್ಚಿಟ್ಟಿದ್ದಾರೆ ಕನ್ನಡ ಪರ ಹೋರಾಟಗಾರ ಅಶೋಕ ಚಂದರಗಿ. ಲೋಕಲ್ ವಿವ್ಯೂ ವಿಶೇಷ ಸಂದರ್ಶನ ದುರದುಂಡಯ್ಯಾ ಬಾವಿಮನಿ