ಬಿಜೆಪಿಯಿಂದ ಗೇಟ್ ಪಾಸ್ ಫಿಕ್ಸ್, ಯತ್ನಾಳಗೆ ಭಾರಿ ಶಾಕ್ ಕೊಟ್ಟ ಅರುಣ್ ಸಿಂಗ್
- 15 Jan 2024 , 2:40 AM
- Belagavi
- 168
ಬೆಳಗಾವಿ: ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಯತ್ನಾಳ ವಿಚಾರವಾಗಿ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಯತ್ನಾಳ ಅವರ ಬಗ್ಗೆ ನನಗೆ ಪ್ರಶ್ನೆ ಮಾಡಬೇಡಿ ನಾನಂತು ಅವರ ಹೆಸರು ತೆಗೆದುಕೊಳ್ಳುವುದಿಲ್ಲ ನಾವು ಈಗಾಗಲೇ ಅನೇಕ ಬಾರಿ ಮಾತನಾಡಿದ್ದೇನೆ ಪದೇ ಪದೇ ಅವರ ಬಗ್ಗೆ ಮಾತನಾಡಿ ಜನಪ್ರಿಯ ಮಾಡಬೇಕಾ.

ನನಗೆ ಅವರ ಬಗ್ಗೆ ಮಾತನಾಡಿ ಜನಪ್ರಿಯ ಮಾಡುವ ಉದ್ದೇಶವಿಲ್ಲ ಎಂದು ಕಿಡಿಕಾರಿದ್ದಾರೆ. ಏಪ್ರಿಲ್ 17 ರ ನಂತರ ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಅಂತಾ ಯತ್ನಾಳ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಂಗ್ ಯತ್ನಾಳ ಅವರಿಗೆ ಮಾಧ್ಯಮದ ಮೇಲೆ ನಂಬಿಕೆ ಇದೇ ಆದ್ರೆ ಬಿಜೆಪಿ ಪಕ್ಷಕ್ಕೆ ಯತ್ನಾಳ ಮೇಲೆ ಶೂನ್ಯದಷ್ಟು ಅಂದ್ರೆ ಒಂದೇ ಒಂದು ಪರ್ಸೆಂಟ್ ನಂಬಿಕೆ ಇಲ್ಲ.

ಪದೇ ಪದೇ ಯತ್ನಾಳ ಅವರ ಬಗ್ಗೆ ಪ್ರಶ್ನೆ ಮಾಡಬೇಡಿ ಯತ್ನಾಳ ಅವರಿಗೆ ನೋಟಿಸ್ ಕೊಟ್ಟಿದ್ದೇವೆ, ಆದಷ್ಟು ಬೇಗ ಅವರನ್ನು ಪಕ್ಷದಿಂದ ತೆಗೆಯುವವರು ಇದ್ದೇವೆ ಎಂದು ಹೇಳಿ ಯತ್ನಾಳ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್ ಇದೆ ಎಂದು ಅರುಣ್ ಸಿಂಗ್ ಬೆಳಗಾವಿಯಲ್ಲಿ ಹೇಳಿಕೆ ನೀಡಿದ್ದಾರೆ.










