ಸಾವಿನ ಸಂಖ್ಯೆ ಪ್ರಕಟಿಸದಿರಲು ಚೀನಾ ಸರ್ಕಾರ ನಿರ್ದಾರ

  • 15 Jan 2024 , 1:08 AM
  • world
  • 92
ಭಾರತ ಚೀನಾ ಸಂಘರ್ಷದಲ್ಲಿ ಸಾವು ನೋವುಗಳು ಸಂಭವಿಸಿದ್ದು ಇದನ್ನು ಹತೋಟಿಗೆ ತರುವದು ಉಭಯ ದೇಶಗಳ ಕರ್ತವ್ಯ ವಾಗಿದೆ. ಲಡಾಕ ಗಲ್ವಾನ್ ಕಣಿವೆಯಲ್ಲಿ ಚೀನಾ ಹೆಲಿಕಾಪ್ಟರ್‌ಗಳು ಸದ್ದು ಮಾಡುತ್ತಿವೆ, ಚೀನಿ ಯೋಧರ ಶವವನ್ನು ತೆಗೆದುಕೊಂಡು ಹೋಗುವ ಪ್ರಕ್ರಿಯೆ ಆರಂಭಿಸಿರುವ ಚೀನಾ. ಸಾವಿನ ಸಂಖ್ಯೆ ತುಲನೆ ಮಾಡೋದು ಬೇಡ ಎರಡು ಕಡೆ ಸಾವು ನೋವು ಸಂಭವಿಸಿದೆ ಎಂದು ಈ ಹಿಂದೆ ಲೆಕ್ಕ ನೀಡಿದ್ದ ಚೀನಾದ ಮಾಧ್ಯಮ ಗ್ಲೋಬಲ್ ಟೈಮ್ಸ್ ಈಗ ಉಲ್ಟಾ ಹೊಡೆದಿದೆ, ಚೀನಾ ಸರ್ಕಾರ ಸಾವಿನ ಸಂಖ್ಯೆ ಪ್ರಕಟಿಸದಿರಲು ನಿರ್ಧರಿಸಿದೆ, ಯೋಧರ ಸಾವಿನ ಸಂಖ್ಯೆ ಕಂಡು ಉಭಯ ದೇಶಗಳ ಬಲಾಬಲ ತುಲನೆ ಮಾಡುವ ಬೇಡ, ಇದರಿಂದ ಸಾರ್ವಜನಿಕರ ನೆಮ್ಮದಿ ಕೆಡುತ್ತದೆ ಎಂದು ಬೀಜಿಂಗ್ ಅರಿತಿದೆ ಎಂದು ಗ್ಲೋಬಲ್ ಟೈಮ್ಸ್ ನೆ ಹು ಕ್ಸಿಜಿನ್ ಪ್ರತಿಕ್ರಿಯಿಸಿದ್ದಾರೆ. ವಿದೇಶಾಂಗ ಸಚಿವಾಲಯದಿಂದ ಪ್ರಕಟಣೆ ವಿದೇಶಾಂಗ ಸಚಿವಾಲಯವು ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಭಾರತದ ಪಡೆ LAC ಭಾಗವನ್ನು ದಾಟಿಲ್ಲ ಹಾಗೂ ಯಾವುದೇ ಗಡಿ ನಿಯಮ ಉಲ್ಲಂಘಿಸಿಲ್ಲ ಚೀನಾದಿಂದಲ್ಲೂ ಇದನ್ನೇ ನೀರಿಕ್ಷಿಸಿದ್ದೇವೆ. ಈ ದುರ್ಘಟನೆಯಿಂದ ಎರಡು ಕಡೆ ಸಾವು ನೋವಾಗಿದೆ.

promotions

Read More Articles