ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತಗಳನ್ನು ಕೇಳಲು ನೈತಿಕ ಹಕ್ಕಿಲ್ಲ:ಜಗದೀಶ್ ಹಿರೇಮನಿ
- 14 Jan 2024 , 9:31 PM
- Belagavi
- 103
ಬೆಳಗಾವಿ: ಸರ್ವಾಂಗಿನ ಸುಂದರ ಭಾರತದ ನಿರ್ಮಾಣದ ಕನಸು ಕಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರನ್ನು ಚುನಾವಣೆಯಲ್ಲಿ ಸೋಲಿಸಿ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ದೆಹಲಿಯಲ್ಲಿ 3, 6 ಅಡಿ ಜಾಗ ಕೊಡದ ಕಾಂಗ್ರೆಸ್ ಪಕ್ಷಕ್ಕೆ ದಲಿತರ ಮತಗಳನ್ನು ಕೇಳಲು ನೈತಿಕ ಹಕ್ಕಿಲ್ಲ ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಭಾರತ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಜಗದೀಶ ಹಿರೆಮನಿ ಕಾಂಗ್ರೆಸ್ ಪಕ್ಷದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಚುನಾವಣಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ನೋಡಿದಾಗ ಕೇವಲ ಜಾತಿಯ ವಿಷಬೀಜಗಳನ್ನು ಬಿತ್ತಿ ತುಷ್ಟೀಕರಣದ ನೀತಿಯಿಂದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಿಂದುಳಿದ ಜನಾಂಗದವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತ ಎಂದು ತಿಳಿದಿದ್ದೆ ಕಾಂಗ್ರೆಸ್ ನಾಯಕರಿಗೆ ಅಂದು ಮಾಡಿದ ತಪ್ಪುಗಳಿಂದ ಹಿಂದುಳಿದ ಜನ ನಮ್ಮ ಜೊತೆ ಇಲ್ಲ ಎನ್ನುವ ಸತ್ಯದ ಅರಿವಾಗಿದೆ.

60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಕೇವಲ ಮತಬ್ಯಾಂಕ್ ವನ್ನಾಗಿ ಮಾತ್ರ ಹಿಂದುಳಿದ ಜನಾಂಗವನ್ನು ಉಪಯೋಗಿಸಿಕೊಂಡರು ಆದರೆ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಹಿಂದೆ ಹಿಂದೆಂದೂ ಕಾಣದಷ್ಟು ದಲಿತರು ಚುನಾಯಿತ ಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ ಕಾರ್ಯಕರ್ತರಿಗೆ ಗುರುತರವಾದ ಜವಾಬ್ದಾರಿಗಳನ್ನು ಜಾತಿ-ಮತ ಪಂತ ಎನ್ನದೆ ಬಿಜೆಪಿ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅತಿಹೆಚ್ಚಿನ ಅವಮಾನ ನೋವು ನೀಡಿದ ಕಾಂಗ್ರೆಸ್ ಪಕ್ಷವನ್ನು ಅಂಬೇಡ್ಕರ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದರು. ಮೋದಿ ನೇತೃತ್ವದ ಸರ್ಕಾರ ಬಂದನಂತರ ಡಾ. ಬಿ.ಆರ್ ಅಂಬೇಡ್ಕರ್ ಪಂಚತೀರ್ಥ ಕ್ಷೇತ್ರಗಳನ್ನು ಪ್ರಪಂಚಕ್ಕೆ ಗುರುತಿಸುವ ಕಾರ್ಯ ಮಾಡಿದ್ದಾರೆ ಅಂಬೇಡ್ಕರ್ ಜನನ ಸ್ಥಳ, ವಿದ್ಯಾಭ್ಯಾಸ ಮಾಡಿದ ಮನೆ ದೀಕ್ಷಾಭೂಮಿ, ಮಹಾ ಪರಿವಾರದ ಸ್ಥಳ, ಚೈತ್ರ ಭೂಮಿ ಇದು ಸ್ಮಾರಕ ಕ್ಷೇತ್ರಗಳನ್ನಾಗಿ ನಿರ್ಮಿಸಿದೆ ಸಾವಿರಾರು ಕೋಟಿ ರೂಪಾಯಿ ವಯಸುವುದರ ಮೂಲಕ ಈ ಕ್ಷೇತ್ರಗಳು ಪ್ರತಿಯೊಬ್ಬರಿಗೂ ಚೈತನ್ಯವನ್ನು ನೀಡಲಿವೆ.
ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಅವರ ಹೆಸರಿನಲ್ಲಿ ರಾಜಕಾರಣ ಮಾಡಿದ್ದು ಬಿಟ್ಟರೆ ಒಂದೇ ಒಂದು ಯೋಜನೆಯನ್ನು ಅವರ ಹೆಸರಿನಲ್ಲಿ ಜಾರಿ ತರಲಿಲ್ಲ ಕರೊನಾ ಸಂದರ್ಭದಲ್ಲಿ 30 ಸಾವಿರ ಗುತ್ತಿಗೆ ಸಫಾಯಿಕರ್ಮಚಾರಿ ಕಾರ್ಮಿಕರಿಗೆ ಆರ್ಥಿಕ ಅನುಕೂಲಮಾಡಲಾಯಿತು. ಬೆಳಗಾವಿ ನಗರ ಒಂದರಲ್ಲಿ 350 ಮನೆಗಳನ್ನು ಕರ್ಮಚಾರಿಗಳಿಗೆ ಕಟ್ಟಿಕೊಡಲಾಗಿದೆ ಬರುವ ಏಪ್ರಿಲ್ 14ರಂದು ದೇಶಾದ್ಯಂತ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮರಣೆ ಪ್ರೇರಣೆ ಕಾರ್ಯಕ್ರಮದೊಂದಿಗೆ ಅಂಬೇಡ್ಕರ್ ಅವರ ವ್ಯಕ್ತಿತ್ವವನ್ನು ದೇಶಕ್ಕೆ ತಿಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ದಲಿತರು ಕಾಂಗ್ರೆಸ್ ಪರ ಇಲ್ಲ ಎನ್ನುವುದನ್ನು ಈ ಲೊಕಸಭಾ ಉಪಚುನಾವಣೆ ಸಿದ್ದಮಾಡಲಿದೆ.
ಡಾ.ಅಂಬೇಡ್ಕರ್ ಹೇಳಿದಂತೆ ಕಾಂಗ್ರೆಸ್ ಉರಿಯುವ ಮನೆ ದಲಿತರು ಹೋಗಬಾರದು ಎಂಬ ಮಾತನ್ನು ಪ್ರತಿಯೊಬ್ಬ ಪಾಲಿಸಿಕೊಂಡು ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಬೇಕೆಂದರು. ಈ ಸಂದರ್ಭದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸ್ಮರಣೆ ಪ್ರೇರಣೆಯ ಮಾಹಿತಿ ಪುಸ್ತಕ ಬಿಡುಗಡೆಗೊಸಿದರು.
ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೆಯ ಪಾಟೀಲ್ ಬೆಳಗಾವಿ ವಿಭಾಗ ಮಾಧ್ಯಮ ಪ್ರಭಾರಿ ಸಿದ್ದು ಮೋಗಲಿಶೆಟ್ಟರ್ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ. ರಾಜೇಶ್ ನೆರ್ಲಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಮಧ್ಯಮ ಸಂಚಾಲಕ ಎಫ್. ಎಸ್. ಸಿದ್ದನಗೌಡರ ಮಹಾನಗರ ಜಿಲ್ಲಾ ಸಂಚಾಲಕ ಶರದ ಪಾಟೀಲ್ ರಾಜ್ಯ ಎಸ್ಸಿ ಮೊರ್ಚಾ ಕಾರ್ಯದರ್ಶಿ ರಾವಬಹುದ್ದುರ ಕದಂ ಮಹಾನಗರ ಎಸ್ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್ ಪಮ್ಮಾರ, ಕಾರ್ಯಾಲಯ ಕಾರ್ಯದರ್ಶಿ ವೀರಭದ್ರಯ್ಯ ಪೂಜಾರ್ ಇದ್ದರು










