ಮಂಗಲಾ ಅಂಗಡಿಯವರನ್ನು ಬಹುಮತದಿಂದ ಗೆಲ್ಲಿಸೋಣ: ಶೆಟ್ಟರ

ಬೆಳಗಾವಿ: ದೇಶದ ಜನತೆ ಹಾಗೂ ದೇಶದ ಹಿತದೃಷ್ಟಿಯಿಂದ ಜನಪರ ಯೋಜನೆಗಳ ಜಾರಿಗೆ ತಂದು ಭ್ರಷ್ಟಾಚಾರ ಮುಕ್ತ ಅಧಿಕಾರ ನೀಡುತ್ತಿರುವ ನರೇಂದ್ರ ಮೋದಿ ಸರ್ಕಾರದಲ್ಲಿ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನ ನಾಡಿನಿಂದ ಮಹಿಳಾ ಸಂಸದರನ್ನ ಆಯ್ಕೆ ಮಾಡುವ ಅವಕಾಶ ಬಂದಿದ್ದು ಹೆಚ್ಚಿನ ಅಂತರದೊಂದಿಗೆ ಮಂಗಲಾ ಅಂಗಡಿ ಅವರನ್ನು ಆಯ್ಕೆ ಮಾಡಬೇಕೆಂದು ಕರ್ನಾಟಕ ಸರ್ಕಾರದ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

promotions

ಸಮೀಪದ ಮೊದಗಾ, ಮಾವಿನಕಟ್ಟಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿ, ದೇಶದಲ್ಲಿ ದುಡಿಯುವ ಕೈಗಳಿಗೆ ಕೆಲಸಗಳನ್ನು ನೀಡುತ್ತಾ ರಾಜ್ಯದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಾ ಅಭಿವೃದ್ಧಿಪರ ಕಾರ್ಯ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲ ಇರಲಿ.‌ಅಕಾಲಿಕ ನಿಧನರಾದ ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ಮಂಗಲಾ ಅಂಗಡಿಯವರನ್ನು ಆಯ್ಕೆ ಮಾಡಬೇಕೆಂದರು.

promotions

ವಿರೋಧಿಗಳು ವೀರರಾಣಿ ಕಿತ್ತೂರು ಚನ್ನಮ್ಮನ ನಾಡಿನಲ್ಲಿ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಹೆಣ್ಣುಮಗಳು ಆಗಿದ್ದರಿಂದ ಹೆಣ್ಣು ಮಕ್ಕಳಿವೆ ಹಗುರವಾಗಿ ಮಾತನಾಡಿ ಕಾಂಗ್ರೆಸ್ ಪಕ್ಷ ಮಹಿಳೆಯರ ಬಗ್ಗೆ ಇರುವ ಕಾಳಜಿ ತೋರಿಸುತ್ತಿದೆ ಇದೊಂದು ನಾಡಿನ ಹೆಣ್ಣುಮಕ್ಕಳಿಗೆ ಮಾಡಿರುವ ಅಪಮಾನ ಇದರಿಂದ ನಾಡಿನ ಜನತೆ ಕಾಂಗ್ರೆಸ್ ಅಭ್ಯರ್ಥಿಯ ಠೇವಣಿ ಕಳೆದುಕೊಳ್ಳುವ ಹಾಗೆ ಹೀನಾಯ ಸೋಲು ಉನಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಧನಂಜಯ್ ಜಾದವ್ ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ್ ಮಾದಮ್ಮನವರ್, ರಮೇಶ ಸರೊದೆ, ರಾಹುಲ ಪಾಟೀಲ, ಸುಭಾಸ ಗೂಳಶಟ್ಟಿ, ಸಂಜಯ ಅಷ್ಠೆಕರ್ ಯಲ್ಲಣ್ಣ ಅಷ್ಟೇಕರ್ ಪ್ರಕಾಶ ದಾನೋಜಿ ಹಾಗೂ ನೂರಾರು ಕಾರ್ಯಕರ್ತರು ಇದ್ದರು.

Read More Articles