ಮತಗಟ್ಟೆ ಅಧಿಕಾರಿಗಳು ತಾಂತ್ರಿಕ ತೊಂದರೆ ಆಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್
- 14 Jan 2024 , 10:24 PM
- Belagavi
- 117
ಬೆಳಗಾವಿ :ಚುನಾವಣಾ ಸಮಯದಲ್ಲಿ ಅಧಿಕಾರಿಗಳು ಎಚ್ಚರ ವಹಿಸಿ ಯಾವುದೇ ತಾಂತ್ರಿಕ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಿಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರವಿವಾರ (ಏ.11) ಚುನಾವಣಾ ಸೂಕ್ಷ್ಮ ವೀಕ್ಷಕರ ಸಭೆಯಲ್ಲಿ ಪೂರ್ವಸಿದ್ಧತೆ ಕುರಿತು ಅವರು ಮಾತನಾಡಿದರು.

ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಬಸ್ ಸೌಲಭ್ಯ ಒದಗಿಸಲಾಗುವುದು. ನೀವು ಕರ್ತವ್ಯಕ್ಕೆ ಹಾಜರಾಗುವ ಮತಗಟ್ಟೆ ಸಂಖ್ಯೆ ಹಾಗೂ ಸ್ಥಳ ಏಪ್ರಿಲ್ 16 ರಂದು ತಿಳಿಸಲಾಗುವುದು ಎಂದು ಹೇಳಿದರು. ಪ್ರತಿ ಮತಗಟ್ಟೆ ಅಧಿಕಾರಿಗಳು ಮುಂಚಿತವಾಗಿ ಮತ ಯಂತ್ರಗಳ ಸಿದ್ಧತೆ ಪಡಿಸಬೇಕು. ಮತದಾನ ಸಮಯದಲ್ಲಿ ತಾಂತ್ರಿಕ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿದರು.

ವೋಟರ್ ಚೀಟಿಯ ಬಗ್ಗೆ ವ್ಯತ್ಯಾಸ ಕಂಡು ಬಂದಲ್ಲಿ ಹಾಗೂ ಅಧಿಕಾರಿಗಳು ಚುನಾವಣೆ ಕರ್ತವ್ಯ ನಿರ್ವಹಿಸುತ್ತಿರುವಾಗ ಸ್ಥಳೀಯ ಯಾವುದೇ ತೊಂದರೆಯಾದಲ್ಲಿ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು ಜಿಲ್ಲಾಧಿಕಾರಿಗಳು ತಿಳಿಸಿದರು. ಮೈಕ್ರೋ ವೀಕ್ಷಕರಿಗೆ ಫೋಟೋ ಪಾಸ್, ಗುರುತಿನ ಚೀಟಿ ಹಾಗೂ ನೇಮಕಾತಿ ಪತ್ರವನ್ನು ನೀಡಲಾಗುವುದು.
ಮತದಾನ ದಿನದ ಹಿಂದಿನ ದಿನದ ಸಂಜೆ ಅಥವಾ ಮತದಾನ ಪ್ರಾರಂಭವಾಗುವ ಕನಿಷ್ಠ ಒಂದು ಗಂಟೆ ಮೊದಲು ಮತಗಟ್ಟೆ ತಲುಪಬೇಕು ಎಂದು ಹೇಳಿದರು. ಮತದಾನದ ನಂತರ ಎಂ.ಓ ತನ್ನ ವ್ಯಾಪ್ತಿಯಲ್ಲಿರುವ ಪ್ರತಿ ಮತದಾನ ಕೇಂದ್ರದ ಮತದಾನ ದಿನದ ಚಟುವಟಿಕೆಗಳನ್ನು ವೀಕ್ಷಕರಿಗೆ ಫಾರ್ಮೆಟ್ ಮೂಲಕ ನೀಡಬೇಕು. ಸೂಕ್ಷ್ಮ ವೀಕ್ಷಕರು ಮತದಾನ ಏಜೆಂಟರ ಉಪಸ್ಥಿತಿ ಮತ್ತು ಎಫ್.ಸಿ.ಎಲ್ ಸೂಚನೆಗಳನ್ನು ಪಾಲಿಸುವುದು.
ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಪ್ರಕಾರ ಮತದಾರರನ್ನು ಸರಿಯಾಗಿ ಗುರುತಿಸಿ ಮತದಾರರ ವಿವರ ದಾಖಲಿಸಿಕೊಳ್ಳಬೇಕು ಹಾಗೂ ಮತದಾರ ಬೆರಳಿಗೆ ಗುರುತು ಮಾಡಲು ಶಾಯಿ ಕಡ್ಡಾಯವಾಗಿ ಬಳಸಬೇಕು ಎಂದು ಸೂಚಿಸಿದರು. ಮತದಾರರು ರಹಸ್ಯವಾಗಿ ಮತ ಚಲಾಯಿಸಲು ತೆರಳುವ ಸಮಯದಲ್ಲಿ ಅಂತರ ಕಾಯ್ದುಕೊಳ್ಳಬೇಕು ಹಾಗೂ ಏಜೆಂಟರ ಯಾವುದೇ ದೂರುಗಳಿದ್ದಲ್ಲಿ ಪರಿಶೀಲಿಸಬೇಕು.
ಮಧ್ಯಂತರ 3 ಗಂಟೆಯ ನಂತರ ಎಷ್ಟು ಮತದಾರರು ಮತ ಚಲಾಯಿಸಿದ್ದಾರೆ ಹಾಗೂ ಮತ ಚಲಾಯಿಸಲು ಬಾಕಿ ಉಳಿದಿರುವ ಮತದಾರರ ವಿವರವನ್ನು ನೀಡಬೇಕು. 5 ಗಂಟೆಯ ನಂತರ ಎಷ್ಟು ಮತದಾರರು ಮತ ಚಲಾವಣೆ ಮಾಡಿದ್ದಾರೆ ಎಂದು ವರದಿ ಸಲ್ಲಿಸಬೇಕು ಎಂದು ಲೋಕಸಭಾ ಚುನಾವಣೆ ಸಾಮಾನ್ಯ ವೀಕ್ಷಕರಾದ ಚಂದ್ರಭೂಷಣ್ ತ್ರಿಪಾಠಿ ಅವರು ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು, ಚುನಾವಣಾ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.










